ಬೆಂಗಳೂರು : ಮದ್ದೂರು ಪ್ರಕರಣ ಹೇಯ ಕೃತ್ಯ. ನಾವು ಬೆಂಗಳೂರಿನಲ್ಲಿದ್ದೇವೋ, ಪಾಕಿಸ್ತಾನದಲ್ಲಿದ್ದೇವೋ ಎನ್ನುವ ಪ್ರಶ್ನೆ ನಮಗೆ ಕಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಈ ರೀತಿಯ ಘಟನೆಗಳು ಪದೆ ಪದೆ ಆಗುತ್ತಿದೆ. ಇದು ಖಂಡನೀಯ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅಶೋಕ್, ಧರ್ಮಸ್ಥಳ, ಮೈಸೂರು ಚಾಮುಂಡೇಶ್ವರಿ ಬಳಿಕ ಈಗ ಮದ್ದೂರಿನಲ್ಲಿ ಹಿಂದೂ ನಂಬಿಕೆಗಳ ಮೇಲೆ ಈ ರೀತಿಯ ಕೃತ್ಯ ಈ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ನಡೆಯುತ್ತಿದೆ. ತಿಮರೋಡಿಯ ಗ್ಯಾಂಗ್ ಸಿದ್ದರಾಮಯ್ಯನ ಸುತ್ತವರಿದು ಬಿಟ್ಟಿದೆ. ಅದೇ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತಿದೆ. ಸರ್ಕಾರದ ಕುಮ್ಮುಕ್ಕಿಲ್ಲದೇ ಈ ರೀತಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಸಾವರ್ಜನಿಕ ರಸ್ತೆ ಇವರ ಅಪ್ಪನ ಆಸ್ತಿನಾ ? ಸರಿಯಾದ ವ್ಯವಸ್ಥೆ ಮಾಡಿದ್ದರೇ, ಈ ರೀತಿಯ ಪರಿಸ್ಥಿತಿ ಬರುತ್ತಿತ್ತೆ ? ಲಾಠಿ ಚಾರ್ಜ್ ಮಾಡುವ ಅವಶ್ಯಕತೆ ಇದೆಯೇ ? ಕಲ್ಲು ತೂರಾಟ ಮಾಡಿದವರಿಗೆ ಶಿಕ್ಷೆ ನೀಡುವುದನ್ನು ಬಿಟ್ಟು, ಪ್ರತಿಭಟನೆ ಮಾಡುವವರ ವಿರುದ್ಧ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಗೂಂಡಾಗಳು ಮಸೀದಿಗಳಲ್ಲೇ ಇರುತ್ತಾರೆ ಎನ್ನುವ ಜ್ಞಾನವಿಲ್ಲವೇ ನಿಮಗೆ ? ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೇಲೆ ನಮ್ಮನ್ನು ಏನೂ ಮಾಡಲ್ಲ ಎಂದು ಈ ಟಿಪ್ಪು ಗ್ಯಾಂಗ್ ಎಲ್ಲಾ ಕಡೆಗಳಲ್ಲಿ ಗಲಭೆಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯ, ಮೈಸೂರಿನಲ್ಲಿ ಈ ಟಿಪ್ಪು ಗ್ಯಾಂಗ್ ಗುರಿಯಾಗಿಸಿಕೊಂಡು ಹಿಂದೂಗಳ ವಿರುದ್ಧ ಏನಾದರೂ ಮಾಡಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದಾರೆಯೇ ಎಂಬ ಆಘಾತ ಕಾಡುತ್ತಿದೆ. ಈ ಸರ್ಕಾರ ಬದುಕಿದೆಯೇ, ಸತ್ತಿದೆಯೇ ಎನ್ನುವುದು ಗೊತ್ತಿಲ್ಲ. ಓಟ್ ಗಾಗಿ ದೇಶವನ್ನೇ ಮಾರಬೇಕೆ ? ಎಂದು ಪ್ರಶ್ನಿಸಿದ್ದಲ್ಲದೇ, ಮಾತೆತ್ತಿದರೆ ಸಂವಿಧಾನ ಪುಸ್ತಕ ಹಿಡಿದುಕೊಳ್ಳುತ್ತಾರೆ. ಸಂವಿಧಾನವನ್ನು ಪಾಲಿಸುವುದು ಎಂದರೇ ಹೀಗೆಯೇ ? ಧರ್ಮಸ್ಥಳ, ಚಾಮುಂಡೇಶ್ವರಿ, ಮದ್ದೂರು ಘಟನೆಗೆ ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೂಗಳು ಒಗ್ಗಟ್ಟಾಗಿಲ್ಲ ಎಂದರೇ ಇನ್ಮುಂದೆ ಇದೇ ಗತಿ. ಸಿದ್ದರಾಮಯ್ಯ ಓಟ್ ಗಾಗಿ ಏನು ಬೇಕಾದರೂ ಮಾಡುತ್ತಾರೆ. ಇವರು ಟಿಪ್ಪು ಏರಿಯಾಗಳನ್ನು ಮಾಡುವುದಕ್ಕೆ ಸಜ್ಜು ಮಾಡುತ್ತಿದ್ದಾರೆ. ಹಿಂದೂಗಳಲ್ಲಿ ಒಗ್ಗಟ್ಟಿಲ್ಲ. ಬೆಂಕಿ ಇಡುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳು ಮೆರವಣಿಗೆ ಮಾಡಿದರೇ ಗಲಭೆಗಳಾಗುತ್ತದೆ. ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ. ಗಣೇಶೋತ್ಸವಕ್ಕೆ ಅನುಮತಿ ತೆಗೆದುಕೊಳ್ಳಬೇಕು. ಬೇರೆಯವರಿಗೆ ಯಾವ ಅನುಮತಿ ಬೇಕಿಲ್ಲ. ಮುಂದಿನ ವರ್ಷ ಸಿದ್ದರಾಮಯ್ಯ ಏನಾದರೂ ಕಾನೂನು ತಂದು ಗಣಪತಿಯನ್ನೇ ಬ್ಯಾನ್ ಮಾಡುತ್ತಾರೆ ಬರೆದಿಟ್ಟುಕೊಳ್ಳಿ ಎಂದು ಕಿಡಿಕಾರಿದ್ದಾರೆ.