ಬೆಂಗಳೂರು: ಧ್ರುವ ಸರ್ಜಾ ಮೂರು ಕೋಟಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ʼನಿರ್ದೇಶಕ ರಾಘವೇಂದ್ರ ಹೆಗಡೆ ಕನ್ನಡ ವಿರೋಧಿʼ ಎಂಬ ಆರೋಪಕ್ಕೆ ರಾಘವೇಂದ್ರ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ಧ್ರುವ ಹೇಳಿಕೆಯನ್ನು ಖಂಡಿಸಿದ ನಿರ್ದೇಶಕ ರಾಘವೇಂದ್ರ, ನಾನು ಕನ್ನಡದವನು ನಾನು ಎಲ್ಲೇ ಇದ್ದರು ನಾನು ಕನ್ನಡಿಗ. ಧ್ರುವ ಸರ್ಜಾಗೆ ಮೂರು ಕೋಟಿ ಕೊಟ್ಟು 8 ವರ್ಷಗಳಾಗಿದ್ದು, ಸಿನಿಮಾ ಮಾಡಲು ಕಾಲ್ ಶೀಟ್ ಕೇಳಿದರೆ ಸಮಯ ಮುಂದೂಡುತ್ತಲೇ ಇದ್ದಾರೆ.
ಸಿನೆಮಾ ಮಾಡಿದರೆ ನಾನು ಕನ್ನಡದಲ್ಲಿ ಮಾಡುತ್ತೀನೆ ಎಂದಿದ್ದೆ. ಅದಕ್ಕೆ ಅವರು, ಇಲ್ಲ ನಮಗೆ ಪ್ಯಾನ್ ಇಂಡಿಯಾ ಸಿನೆಮಾ ಮಾಡಿ ಎಂದಿದ್ದರು. ಈಗ ನಾನು ತೆಲುಗು ಸಿನೆಮಾ ಮಾಡುತ್ತಿದ್ದೇನೆ, ನಂತರ ನಿಮಗೆ ಸಿನೆಮಾ ಮಾಡುತ್ತೇನೆ ಎಂದಿದ್ದರು.
ಈಗಾಗಲೇ ಎಂಟು ವರ್ಷಗಳಾಗಿವೆ. ಮತ್ತೊಂದು ಸಿನೆಮಾವೆಂದರೆ ಮತ್ತೆ ನಾಲ್ಕು ವರ್ಷಗಳು ಬೇಕು. ನನಗೆ ಕಾಯುವುದಕ್ಕೆ ಆಗುವುದಿಲ್ಲ. ನನ್ನ ಹಣವನ್ನು ವಾಪಸ್ ನೀಡಿ ಎಂದು ನೋಟಿಸ್ ಕೊಟ್ಟಿದ್ದೇನೆ. ಅದಕ್ಕೆ ನಾನು ಕನ್ನಡ ವಿರೋಧಿ ಎಂದು ಧ್ರುವ ಅವರ ಜೊತೆ ಇರುವವರು ಹೇಳುತ್ತಿದ್ದಾರೆ.
ನಾನು ತಮಿಳು ಸಿನಿಮಾ ಮಾಡಬೇಕು ಎಂದಿದ್ದರೆ ತಮಿಳು ಹೀರೋ ಜೊತೆ ಮಾಡುತ್ತೇನೆ. ಧ್ರುವ ಸರ್ಜಾ ಅವರೊಂದಿಗೆ ತಮಿಳು ಸಿನೆಮಾ ಮಾಡಲಿ ಎಂದು ಹೇಳಿದ್ದಾರೆ.
ನನಗೆ ನನ್ನ ಸಹ ನಿರ್ಮಾಪಕರಿಂದ ಒತ್ತಡವಿದೆ ಎಂದು ಧ್ರುವ ಹೇಳುತ್ತಾರೆ. ಆದರೆ ನನಗೆ ಯಾರಿಂದಲೂ ಒತ್ತಡವಿಲ್ಲ. ಧ್ರುವ ಅವರಿಂದಲೇ ಒತ್ತಡವಿದೆ ಎಂದಿದ್ದಾರೆ.



















