ಕೊಪ್ಪಳ: ಸಾರಿಗೆ ಬಸ್ ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಕೊಪ್ಪಳದ ಕುಕನೂರ ತಾಲೂಕಿನ ಮಸಬ ಹಂಚಿನಾಳದಲ್ಲಿ ನಡೆದಿದೆ.
ಬಸ್ ತಡರಾತ್ರಿ ಯಲಬುರ್ಗಾದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಮಸಬ ಹಂಚಿನಾಳ ಬಳಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಪರಿಣಾಮ ಬಸ್ ನ ಗಾಜು ಪುಡಿಪುಡಿಯಾಗಿದೆ.
ಕಲ್ಲು ತೂರಾಟದ ಬಳಿಕ ಬಸ್ ನ್ನು ಚಾಲಕ ವಾಪಸ್ ಡಿಪೋಗೆ ಕೊಂಡೊಯ್ದಿದ್ದಾರೆ. ಇದರಿಂದ ಪ್ರಯಾಣಿಕರು ರಾತ್ರಿ ವೇಳೆ ಪರದಾಡುವಂತಾಗಿದೆ.



















