ಬೆಂಗಳೂರು: ರಾಜ್ಯದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಅಪೌಷ್ಟಿಕತೆ ನಿವಾರಣೆಗೆ 10 ದಿನದ ಆರೋಗ್ಯ ಅಭಿಯಾನ ಆಯೋಜನೆಗೆ 2025-26ನೇ ಸಾಲಿನ ಅವಧಿಯಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿ 3,60,06,700 ರೂ. ಅನುದಾನ ಬಿಡುಗಡೆ ಮಾಡಲು ನಿರ್ಧಾರ ಮಾಡಲಾದೆ.
ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪೋಷಕರಿಗೆ ವೈದ್ಯಕೀಯ ನೆರವು ಮತ್ತು ಪೌಷ್ಟಿಕ ಚಿಕಿತ್ಸಕ ಆರೈಕೆಗೆ ನೆರವಾಗಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೆರವು ನೀಡಲು ತೀರ್ಮಾನಿಸಲಾಗಿದ್ದು, ರಾಜ್ಯದ 33 ಜಿಲ್ಲಾ ಕೇಂದ್ರಗಳಲ್ಲೂ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಗಿದೆ.
6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದರೆ ಮಾತ್ರ ಅನುದಾನ ನೀಡಲಾಗುತ್ತದೆ. ಅಪೌಷ್ಟಿಕತೆ ಹೊಂದಿರುವ ಪ್ರತಿ ಮಗುವಿನ ಜತೆಗೆ ಎನ್.ಆರ್.ಸಿಗೆ ದಾಖಲಾದ ಮಗುವಿನ ಪೋಷಕರಿಗೆ ಅನುದಾನ ನೀಡಲಾಗುವುದು.
ಕನಿಷ್ಠ 10 ದಿನ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿದ್ದು, ಸದ್ಯ ರಾಜ್ಯದಲ್ಲಿ 7661 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆ ನಿವಾರಣೆಗೆ ಔಷಧಿ, ಆಹಾರಕ್ಕಾಗಿ 76,61,000 ರೂ. ಪೋಷಕರ ವೇತನ ಭತ್ಯೆಗಾಗಿ 2,83,45,700 ರೂ ಖರ್ಚು ಮಾಡಲು ತೀರ್ಮಾನ ಮಾಡಲಾಗಿದೆ.
“ದಿನವೊಂದಕ್ಕೆ ಎಷ್ಟು ಹಣ ನೀಡಲಾಗುತ್ತದೆ?”
- ದಿನವೊಂದಕ್ಕೆ ಪ್ರತಿ ಮಗುವಿಗೆ ಔಷಧಿಗಾಗಿ 125 ರೂ.
- ದಿನವೊಂದಕ್ಕೆ ಪ್ರತಿ ಮಗುವಿಗೆ ಆಹಾರಕ್ಕಾಗಿ 125 ರೂ.
- ದಿನವೊಂದಕ್ಕೆ ಮಗುವಿನ ತಾಯಿ/ಪೋಷಕರ ಆಹಾರಕ್ಕಾಗಿ 100 ರೂ.
- ದಿನವೊಂದಕ್ಕೆ ಮಗುವಿನ ತಾಯಿ/ಪೋಷಕರಿಗೆ ಪರಿಹಾರ ವೇತನ ಭತ್ಯೆ 370 ರೂ.
- ಜಿಲ್ಲಾ ಪೌಷ್ಟಿಕ ಪುನಶ್ವೇತನ ಕೇಂದ್ರಗಳಲ್ಲಿ ದಾಖಲಾಗುವ ಮಕ್ಕಳ ತಾಯಂದಿರು/ಪೋಷಕರಿಗೆ ದಿನಕ್ಕೆ100 ರೂ. ಭತ್ಯೆ.



















