ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿರುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಭರ್ಜರಿ ಆತಿಥ್ಯ ನೀಡಲು ಅರಣ್ಯ ಇಲಾಖೆ ಮತ್ತು ಮೈಸೂರು ಅರಮನೆ ಮಂಡಳಿ ಸಜ್ಜಾಗಿದೆ.
ಮೈಸೂರು ದಸರಾ ಮಹೋತ್ಸವದಲ್ಲಿ 14 ಆನೆಗಳು, 150 ಕ್ಕೂ ಹೆಚ್ಚು ಮಾವುತರು ಮತ್ತು ಅವರ ಕುಟುಂಬಗಳು ಭಾಗವಹಿಸಲಿದೆ.
ಈ ಬಾರಿ ಸರ್ಕಾರ ದಸರಾ ಮಹೋತ್ಸವದಲ್ಲಿ ಮಾವುತರಿಗಷ್ಟೇ ಅಲ್ಲದೆ ಅವರ ಕುಟುಂಬದವರಿಗೂ ಅದ್ಧೂರಿಯಾಗಿ ಸ್ವಾಗತ ಕೋರಲು ಆಯೋಜನೆ ಮಾಡಲಾಗಿದೆ.



















