ಕಲಬುರಗಿ: ಕಲಬುರಗಿಯಲ್ಲಿ ಅಕ್ರಮವಾಗಿ ರಸಗೊಬ್ಬರವನ್ನು ದಾಸ್ತಾನು ಮಾಡಿಟ್ಟ ಜೇವರ್ಗಿ ಶಿವಗಂಗಾ ಟ್ರೇಡರ್ಸ್ ಅಂಗಡಿಯ ಮೇಲೆ ಕೃಷಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.
ತಾಲೂಕು ಕೃಷಿ ಅಧಿಕಾರಿ ಚಂದ್ರಕಾಂತ್ ಜೀವಣಗಿ ಅವರು ಕಲಬುರಗಿಯಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ 500 ಚೀಲ ಡಿಎಪಿ ಮತ್ತು 150 ಚೀಲ ಯೂರಿಯ ಗೊಬ್ಬರವನ್ನು ಜಪ್ತಿ ಮಾಡಿದ್ದಾರೆ.
ಅಂಗಡಿ ಮಾಲೀಕ ಅಕ್ರಮವಾಗಿ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡು ಒಂದು ಪ್ಯಾಕೆಟ್ ಡಿಎಪಿ ದರ 1350 ಆದರೆ ರೈತರಿಂದ 1500 ಅದಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡಿತ್ತಿದ್ದು, ಡಿಎಪಿ ರಸಗೊಬ್ಬರ ಜೊತೆ ಮತ್ತೊಂದು ಕ್ರಿಮಿನಾಶಕ ಖರೀದಿ ಮಾಡಬೇಕು ಇಲ್ಲ ಅಂದರೆ ಗೊಬ್ಬರ ಇಲ್ಲ ಅನ್ನುತ್ತಿದ್ದ. ರಸಗೊಬ್ಬರ ಇಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಹಾಗಾಗಿ ಹೆಚ್ಚಿನ ಹಣ ಕೊಟ್ಟರೆ ಬ್ಲಾಕ್ ನಲ್ಲಿ ಗೊಬ್ಬರ ಸಿಗುತ್ತದೆ. ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿ ಮಾಡಿ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ.
ಶಿವಗಂಗಾ ಟ್ರೇಡರ್ಸ್ ಮಾಲೀಕನಿಗೆ ಕಾರಣ ಕೇಳಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.
ನಿನ್ನೆ ಅಂಗಡಿ ಮಾಲೀಕ, ಹೋರಾಟಗಾರ ಶ್ರವಣ ಕುಮಾರ್ ಅನ್ನುವವರ ಬಳಿ ಹೆಚ್ಚಿಗೆ ಹಣ ಪಡೆದಿದ್ದ, ಶ್ರವಣ ಕುಮಾರ್ ಅಂಡಗಿ ಮಾಲೀಕನ ವಿರುದ್ಧ ದೂರು ನೀಡಿದ್ದರು. ದೂರಿನ ಅನ್ವಯ ಅಧಿಕಾರಿಗಳು ಗೋಡೌನ್ ಮೇಲೆ ದಾಳಿ ನಡೆಸಿದ್ದಾರೆ.



















