ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಕಿರಣ್ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಲಿಯಾಳಿ ಅಜಿತ್ ಬಗ್ಗೆ ಕೆಲವು ದಾಖಲೆಗಳು ದೊರಕಿದ್ದವು. ಹೀಗಾಗಿ ಪೊಲೀಸರು ವಾಟ್ಸಾಪ್ ಮೂಲಕ ಅಜಿತ್ ಗೆ ನೋಟಿಸ್ ನೀಡಿದ್ದರು.
ಅಜಿತ್, ವಿಳಾಸ ಇಲ್ಲದ ಲೆಟರ್ ಹೆಡ್ ನಲ್ಲಿ ಉತ್ತರ ನೀಡಿದ್ದರು. ಅಜಿತ್ ಭೈರತಿ ಬಸವರಾಜ್ ಆಪ್ತ ಎನ್ನಲಾಗಿದೆ. ಲೆಟರ್ ಹೆಡ್ ನಲ್ಲಿ “ನಾನು ಹೈಕೋರ್ಟ್ ವಕೀಲ, ನನಗೆ ನೀವು ಸುಖಾಸುಮ್ಮನೆ ತೊಂದರೆ ನೀಡುತ್ತಿದ್ದೀರಿ. ನನಗೂ ಹಾಗೂ ಜಗ್ಗನಿಗೆ ಆಗಲಿ ಅಥವಾ ಕೊಲೆಯಾದ ಶಿವಪ್ರಕಾಶ್ ಅಲಿಯಾಸ್ ಬಿಕ್ಲ ಶಿವನಿಗೆ ಆಗಲಿ ಯಾವುದೇ ರೀತಿಯಾದ ಸಂಬಂಧವಿಲ್ಲ. ಒಂದು ವೇಳೆ ನೀವು ನನ್ನನ್ನು ಈ ಕೇಸ್ ನಲ್ಲಿ ಸಿಲುಕಿಸುವ ಪ್ರಯತ್ನ ಪಟ್ಟರೆ ನಾನು ಕಾನೂನಿನ ರೀತಿಯಲ್ಲಿ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಮಲಿಯಾಳಿ ಅಜಿತ್ ಉತ್ತರ ನೀಡಿದ್ದಾರೆ.
ಇದಕ್ಕೆ ಉತ್ತರವಾಗಿ ಪೊಲೀಸರು ಕೂಡ ಕೇಸ್ ನ ಅಂಶಗಳನ್ನು ಇಟ್ಟುಕೊಂಡು ವಾಟ್ಸ್ ಅಪ್ ಮುಖಾಂತರವೇ ಉತ್ತರ ಕಳುಹಿಸಿದ್ದರು. ಆದರೆ, ಈಗ ಕಚೇರಿ ಖಾಲಿ ಮಾಡಿ ಅಜಿತ್ ಪರಾರಿಯಾಗಿದ್ದಾರೆ



















