ಬೆಂಗಳೂರು: ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಭಾರತೀಯ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (ITI Limited) ಕಂಪನಿಯಲ್ಲಿ ಖಾಲಿ ಇರುವ 43 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ಸಲ್ಟಂಟ್ ಮತ್ತು ಯಂಗ್ ಪ್ರೊಫೇಷನಲ್ಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್ ನ ವಿವಿಧ ಯೋಜನೆಗಳಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 28ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಅಡ್ವೈಸರ್: 2
ಕನ್ಸಲ್ಟಂಟ್: 7
ಅಸೋಸಿಯೇಟ್ ಕನ್ಸಲ್ಟಂಟ್ : 14
ಯುವ ವೃತ್ತಿಪರ (ಪದವೀಧರರು) : 5
ಯುವ ವೃತ್ತಿಪರ (ಟೆಕ್ನಿಷಿಯನ್) : 15
ವೇತನ ಶ್ರೇಣಿ :
ಕನ್ಸಲ್ಟಂಟ್: 1,25,000 ರೂಪಾಯಿ
ಕನ್ಸಲ್ಟಂಟ್: 75,000 ರೂಪಾಯಿ
ಅಸೋಸಿಯೇಟ್ ಕನ್ಸಲ್ಟಂಟ್: 35,000 ರೂಪಾಯಿ
ಯುವ ವೃತ್ತಿಪರ (ಪದವೀಧರರು): 60,000 ರೂಪಾಯಿ
ಯುವ ವೃತ್ತಿಪರ (ಟೆಕ್ನಿಷಿಯನ್): 35,000 ರೂಪಾಯಿ
ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಡಿಪ್ಲೋಮಾ, ಬಿ.ಇ, ಬಿ.ಟೆಕ್ ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಕೌಶಲ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರೋದಿಲ್ಲ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://itiltd.in/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕನಿಷ್ಠ 30 ರಿಂದ 65 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ 11ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.



















