ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದ ಕಾರ್ಯಾರಂಭವನ್ನು ಶೀಘ್ರಗತಿಯಲ್ಲಿ ಸಾಗಿಸುವ ಉದ್ದೇಶದಿಂದ ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಸೂರ್ಯ ಭೇಟಿ ಮಾಡಿದ್ದು, ಈ ವೇಳೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಅವರಿಂದ ಶೀಘ್ರವೇ ಹಳದಿ ಮಾರ್ಗಕ್ಕೆ ಅನುಮೋದನೆ ನೀಡಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಹೆಚ್ಚಿನ ಸಾರಿಗೆ ಆಧಾರಿತ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಕಾರುಗಳು, ಇತರ ವೈಯಕ್ತಿಕ ವಾಹನಗಳಿಂದ ಜರನ್ನು ಸಾರ್ವಜನಿಕ ಸಾರಿಗೆ ವರ್ಗಾಯಿಸಬೇಕಿದೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಸಹಕರಿಸುವಂತೆ ಆಗ್ರಹಿಸಿದ್ದಾರೆ.
ಮುಂದಿನ ಒಂದು ದಶಕದಲ್ಲಿ ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳಲ್ಲಿ ಕನಿಷ್ಠ 5 ಭಾರತೀಯ ನಗರಗಳನ್ನು ಹೊಂದುವ ಗುರಿ ನಮ್ಮದಾಗಬೇಕು ಎಂದು ಹೇಳಿದ್ದಾರೆ.
ಜಾಗತಿಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು. ನಗರಗಳಿಗೆ ರೈಲುಗಳ ಸಂಚಾರ ಸುಗಮಗೊಳಿಸಬೇಕಿದೆ. ದೇಶಾದ್ಯಂತ ಎಲ್ಲಾ ಮೆಟ್ರೋ ರೈಲುಗಳನ್ನು ಪ್ರಮಾಣೀಕರಿಸುವಂತೆ ಸಂದರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೂರನೇ ರೈಲು ಬಂದ ಬಳಿಕ ಸಿಎಂಆರ್‌ಎಸ್ ತಂಡ ಪ್ರೋಟೊಟೈಪ್ ಡ್ರೈವರ್ಲೆಸ್ ರೈಲನ್ನು ಪರೀಶಿಲಿಸಿದ್ದಾರೆ. ಬಾಕಿ ಇರುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಐಟಿ ಕಾರಿಡಾರ್ ಸಂಪರ್ಕಿಸುವ ಈ ಹಳದಿ ಮಾರ್ಗದ ಎಲ್ಲ ರೈಲು ನಿಲ್ದಾಣಗಳ ತಪಾಸಣೆ ಮಾಡಲಿದ್ದಾರೆ. ಇದಾದ ಬಳಿಕ ಹಳದಿ ಮಾರ್ಗಕ್ಕೆ ಅನುಮೋದನೆ ನೀಡುವುದು ಬಾಕಿ ಇದೆ.
ಪಶ್ಚಿಮ ಬಂಗಾಳದ ಟಿಟಾಗರ್ ಕಂಪನಿಯಿಂದ ಈ ಮೊದಲೇ ಮಾತು ಕೊಟ್ಟಂತೆ ಡ್ರೈವರ್‌ಲೆಸ್ ರೈಲು ಪೂರೈಕೆ ವಿಳಂಬವಾಗಿದೆ. ಇದರಿಂದ ಹಳದಿ ಮೆಟ್ರೋ ಮಾರ್ಗ ಕಾರ್ಯಾರಚಣೆ ವಿಳಂಬವಾಗುತ್ತಿದೆ. ಈ ಮಾರ್ಗ ಆರಂಭಕ್ಕೆ ಕನಿಷ್ಠ ಎಂಟು ರೈಲುಗಳಾದರೂ ಬೇಕು. ಸದ್ಯ BMRCL ಬಳಿ ಕೇವಲ ಮೂರು ರೈಲುಗಳಿವೆ. ಮುಂದಿನ ದಿನಗಳಲ್ಲಿ ತಿಂಗಳಿಗೆ ಎರಡರಂತೆ ರೈಲು ಪೂರೈಕೆಗೆ ಕಂಪನಿ ಬದ್ಧವಾಗಿರುವುದಾಗಿ ಇತ್ತೀಚೆಗೆ ತಿಳಿಸಿದೆ. ಈ ಸಂಬಂಧ ಸಿಎಂಆರ್‌ಎಸ್ ತಡಮಾಡದೇ ಹಳದಿ ಮಾರ್ಗಕ್ಕೆ ಅನುಮೋದನೆ ನೀಡುವಂತೆ, ಕೇಂದ್ರ ಸಚಿವರ ಮಧ್ಯ ಪ್ರವೇಶಿಸುವಂತೆ ಮನವಿ ಪತ್ರ ಮೂಲಕ ಆಗ್ರಹಿಸಿದ್ದಾರೆ.



















