ಕೃಷ್ಣಾ ಭಾಗ್ಯ ಜಲನಿಗಮದ ಬಗ್ಗೆ ಚರ್ಚೆ ಮಾಡಿದ್ದೇವೆ. ರೇವಣ ಸಿದ್ದೇಶ್ವರ ಯೋಜನೆಗೆ ಪೂಜೆ ಸಲ್ಲಿಸಲಿದ್ದೇವೆ. 2 ಸಾವಿರ ಕೋಟಿಯಷ್ಟು ಯೋಜನೆಗೆ ಭೂಮಿ ಪೂಜೆ ಇದೆ. ಟೆಂಡರ್ ಕರೆದಿದ್ದೇವೆ. ಬೋರ್ಡ್ ಅಪ್ರೂವಲ್ ಮಾಡಿ ಭೂಮಿ ಪೂಜೆ ಮಾಡಲು ನಿರ್ಧರಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಪ್ರೂವಲ್ ಮಾಡದೆ ಹಿಂದಿನ ಸರ್ಕಾರ ಮಾಡಿದ್ದವು. ಅಪ್ರೂವಲ್ ಪಡೆದು ಸೋಮವಾರ ಹೋಗುತ್ತಿದ್ದೇವೆ. ದೆಹಲಿಗೆ ಹೋಗಿ ಬಂದ ಬಳಿಕ, ನೀರಾವರಿ ನಿಗಮದ ಬಗ್ಗೆ ತಿಳಿಸಿದ್ದೇವೆ. ಕೃಷ್ಣಾ, ಎತ್ತಿನಹೊಳೆ, ಕಳಸಬಂಡೂರಿ, ಮೇಕೇದಾಟು ಯೋಜನೆಗಳಿಗೆ ಏನೆಲ್ಲಾ ಪ್ರಸ್ತಾವನೆ ಇದೆ ಅದನ್ನ ತಿಳಿಸಿರುವುದಾಗಿ ಡಿಸಿಎಂ ಹೇಳಿದ್ದಾರೆ.



















