ಬೆಂಗಳೂರು: ಕೇಂದ್ರ ಸರ್ಕಾರರದ ಅಧೀನದಲ್ಲಿರುವ ಫೆರೊ ಸ್ಕ್ರ್ಯಾಪ್ ನಿಗಮ ಲಿಮಿಟೆಡ್ (FSNL Non Executive Recruitment 2025) ಕಂಪನಿಯಲ್ಲಿ ಸುಮಾರು 50 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಸಿಸ್ಟಂಟ್, ಎಲೆಕ್ಟ್ರಿಶಿಯನ್ ಸೇರಿ ಹಲವು ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜುಲೈ 24 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಮೇಲ್ವಿಚಾರಕರು, ಸಹಾಯಕರು, ಸಹಾಯಕ ಫೋರ್ ಮ್ಯಾನ್ ಚುನಾಯಿತ, ಕ್ರೇನ್ ಆಪರೇಟರ್, ಮೆಕ್ಯಾನಿಕ್, ಎಲೆಕ್ಟ್ರಿಶಿಯನ್, ವೆಲ್ಡರ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗಳ ವಿರ
ಸಂಸ್ಥೆ ಹೆಸರು : ಫೆರೊ ಸ್ಕ್ರ್ಯಾಪ್ ನಿಗಮ ಲಿಮಿಟೆಡ್ (FSNL)
ಒಟ್ಟು ಹುದ್ದೆ: 50
ಹುದ್ದೆ ಹೆಸರು : ಸೂಪರ್ ವೈಸರ್, ಅಸಿಸ್ಟಂಟ್, ಎಲೆಕ್ಟ್ರಿಶಿಯನ್ ಇತ್ಯಾದಿ
ಉದ್ಯೋಗ ಸ್ಥಳ : ದೇಶಾದ್ಯಂತ
ಅರ್ಜಿ ಸಲ್ಲಿಕೆ ಮಾದರಿ : ಇಮೇಲ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 24
ಎಫ್ ಎಸ್ ಎನ್ ಎಲ್ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಡಿಪ್ಲೋಮಾ, ಐಟಿಐ, ಪದವಿ ಸೇರಿ ಆಯಾ ಹುದ್ದೆಗಳಿಗೆ ಅನುಗುಣವಾದ ವಿದ್ಯಾರ್ಹತೆ ಹೊಂದಿರಬೇಕು. 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ 27 ಸಾವಿರ ರೂ.ವರೆಗೆ ಸಂಬಳ ನೀಡಲಾಗುತ್ತದೆ.
ಲಿಖಿತ ಪರೀಕ್ಷೆ, ಟ್ರೇಡ್ ಎಕ್ಸಾಮ್, ಸಂದರ್ಶನ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು fsnl.co.in ವೆಬ್ ಸೈಟ್ ಗೆ ತೆರಳಿ ಅಧಿಸೂಚನೆಯನ್ನು ಓದಬೇಕು. ಬಳಿಕ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು, ಭರ್ತಿ ಮಾಡಬೇಕು. ಅರ್ಜಿಯ ಜತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ hr@fsnl.co.in](mailto:hr@fsnl.co.in ಮೇಲ್ ಐಡಿಗೆ ಕಳುಹಿಸಬೇಕು.



















