ಸಚಿವ ರಾಜಣ್ಣ ಕ್ರಾಂತಿ ಆಗುತ್ತೆ ಅಂತಿದ್ದಾರೆ ನಿಜ. ಹಾಗಂತಾ ಇಂಥದ್ದೇ ಅಂತಾ ಏನಾದ್ರೂ ಸ್ಪಷ್ಟವಾಗಿ ಹೇಳಿದ್ದಾರಾ. ಹಾಗಿದ್ರೆ ಏನದು ಕ್ರಾಂತಿ, ನಿಜಕ್ಕೂ ಅದು ಅವರ ವಯಕ್ತಿಕ ಅಭಿಪ್ರಾಯ ಅಂತಾ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ರಾಜ್ಯದ ಉಸ್ತುವಾರಿ ಸುರ್ಜೇವಾಲ, ವೇಣುಗೋಪಾಲ್ ಇಬ್ರೂ ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಚಿಂತನೆಯೇ ಇಲ್ಲಾ ಅಂತಾ. ಹಾಗಿದ್ರೆ ಇದಕ್ಕಿಂತಾ ಸ್ಪಷ್ಟತೆ ಇನ್ನೇನು ಬೇಕು ಅಂತಾ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ.



















