ಲಾಡ್ಜ್ನಲ್ಲಿ ರೂಮ್ ನೀಡದಿದ್ದಕ್ಕೆ ಕಿಡಿಗೇಡಿಗಳು ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ಲಾಡ್ಜ್ ನಲ್ಲಿ ರೂಮ್ ನೀಡದ್ದಕ್ಕೆ ಕಿಡಿಗೇಡಿಗಳು ಕೈಯಲ್ಲಿ ಲಾಂಗ್, ಮಚ್ಚು ಹಿಡಿದು ಕಲ್ಲು ತೂರಿ ಬೈಕ್ ಹಾಗೂ ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.
ಪಟ್ಟಣದ ಬೃಂದಾವನ ಲಾಡ್ಜ್ ಮೇಲೆ ಮೂವರು ಯುವಕ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮೂವರು ಯುವಕರು ಬಂದು ಲಾಡ್ಜ್ ನಲ್ಲಿ ರೂಮ್ ಕೇಳಿದ್ದಾರೆ. ಆದರೆ, ಅವರು ಕುಡಿದಿದ್ದ ಹಿನ್ನೆಲೆಯಲ್ಲಿ ರೂಮ್ ನೀಡಲು ಮಾಲೀಕರು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಾದ ಯುವಕರು, ಲಾಡ್ಜ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಅಲ್ಲೆ ಪಕ್ಕದಲ್ಲಿ ಇದ್ದ ಕಾರು ಹಾಗೂ 5ಕ್ಕೂ ಅಧಿಕ ಬೈಕ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಕಿಡಿಗೇಡಿಗಳ ಅಟ್ಟಹಾಸಕ್ಕೆ ಕಾರು ಮತ್ತು ಬೈಕ್ ಗಳು ಹಾನಿಯಾಗಿವೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಮಹಾರಾಷ್ಟ್ರದ ಇಂಚಕರಂಜಿ ಮೂಲದವರು ಎನ್ನಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.