ರಾಯ್ಪರ್: ಛತ್ತಿಸ್ ಗಢದ (Chhattisgarh) ಸೂಕ್ಮಾ ಜಿಲ್ಲೆಯಲ್ಲಿ ಮತ್ತೆ ನಕ್ಸಲ್ ದಾಳಿ ನಡೆದಿದ್ದು, ಸ್ಫೋಟದಲ್ಲಿ (IED Blast) ಸ್ಥಳೀಯ ಎಎಸ್ಪಿ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಆಕಾಶ್ ರಾವ್ ಗಿರಿಪುಂಜೆ ಮೃತ ಎಎಸ್ಪಿ (ASP) ಎನ್ನಲಾಗಿದೆ. ಕೊಂಟಾ-ಎರಾಬೋರ್ ರಸ್ತೆಯ ದೋಂಡ್ರಾ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಡಿಎಸ್ಪಿ ಮತ್ತು ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ನಕ್ಸಲರೇ ಪೊಲೀಸರನ್ನು ಟ್ರ್ಯಾಪ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಿ ಪೊಲೀಸರು ಹೊರ ಬರುತ್ತಿದ್ದಂತೆ ಐಇಡಿ ಸ್ಫೋಟಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಎಸ್ಪಿ ಸಾವಿಗೆ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಕಂಬನಿ ಮಿಡಿದಿದ್ದಾರೆ.