ಬೆಂಗಳೂರು: ಎಸ್ಸೆಸ್ಸೆಲ್ಸಿ ಫೇಲ್ ಆಗುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆದರೂ ಅಂತಹ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸರ್ಕಾರ ಅವಕಾಶ ನೀಡಲು ಮುಂದಾಗಿದೆ.
ಫೇಲ್ ಆದರೂ ವಿದ್ಯಾರ್ಥಿಗಳು ಬಯಸಿದರೆ ಮತ್ತೆ ಮಕ್ಕಳಂತೆ ಶಾಲೆಗೆ ಹೋಗಬಹುದು. ಈ ವರ್ಷದಿಂದಲೇ ಇಂತಹದೊಂದು ಅವಕಾಶ ನೀಡಲು ಸರ್ಕಾರ ಮುಂದಾಗಿದೆ.
SSLC ಫೇಲ್ ಆದರೂ ಶಾಲೆಗೆ ಹೋಗೋಕೆ ರೂಲ್ಸ್ ಏನು ಗೊತ್ತಾ?
- SSLCಯಲ್ಲಿ ನಡೆಯುವ 3 ಪರೀಕ್ಷೆಯಲ್ಲೂ ಫೇಲ್ ಆಗುವ ವಿದ್ಯಾರ್ಥಿಗೆ ಈ ಅವಕಾಶ ಸಿಗಲಿದೆ.
- ಸರ್ಕಾರಿ ಶಾಲೆಯಲ್ಲಿ ಮಾತ್ರ ಈ ಅವಕಾಶ ಸಿಗಲಿದೆ.
- ಮತ್ತೆ ಓದೋಕೆ ಇಷ್ಟ ಪಡುವ ವಿದ್ಯಾರ್ಥಿ ಶಾಲೆಗೆ ಹೋಗಿ ಮಾಹಿತಿ ಕೊಟ್ಟು ಮರು ದಾಖಲಾತಿ ಆಗಬೇಕು.
- ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಯಂತೆ ದಾಖಲಾತಿ ಆಗಬೇಕು.
- ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳನ್ನು ಮತ್ತೆ ದಾಖಲಾತಿ ಆಗುವ ವಿದ್ಯಾರ್ಥಿಗೆ ಕೊಡಲಾಗುತ್ತದೆ.
- ಬೇರೆ ಮಕ್ಕಳಂತೆ ತರಗತಿಯಲ್ಲಿ ಕೂತು ಪಾಠ ಕೇಳಬಹುದು.