ನವದೆಹಲಿ: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ, ಕೃತಕ ಅಂಗಗಳ ಉತ್ಪಾದನೆಗೆ ಹೆಸರುವಾಸಿಯಾಗಿರುವ ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಖಾಲಿ ಇರುವ 43 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಜನರಲ್ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್, ಜೂನಿಯರ್ ಮ್ಯಾನೇಜರ್, ಮೆಡಿಕಲ್ ಆಫೀಸರ್, ಡೆಪ್ಯೂಟಿ ಮ್ಯಾನೇಜರ್, ಅಕೌಂಟಂಟ್, ಎಸ್ಎಪಿ ಸ್ಪೆಷಲಿಸ್ಟ್, ಹಾರ್ಡ್ ವೇರ್ ಹಾಗೂ ನೆಟ್ ವರ್ಕ್ ಎಂಜಿನಿಯರ್ ಸೇರಿ ಒಟ್ಟು 43 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಜುಲೈ 4 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ alimco.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ನೇಮಕಾತಿ ಸಂಸ್ಥೆ: ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ
ಒಟ್ಟು ಹುದ್ದೆಗಳು: 43
ಉದ್ಯೋಗ ಸ್ಥಳ: ದೇಶಾದ್ಯಂತ
ಹುದ್ದೆಗಳ ಹೆಸರು: ಮ್ಯಾನೇಜರ್, ಆಫೀಸರ್
ಸಂಬಳ: 17,110-2,60,000 ರೂ.
ಜನರಲ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. 2024ರ ಗೇಟ್ ಪರೀಕ್ಷೆಯ ಅಂಕಗಳು, ಲಿಖಿತ ಪರೀಕ್ಷೆ, ಕೌಶಲಗಳ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್ಸೈಟ್ https://alimco.in/ ಗೆ ಭೇಟಿ ನೀಡಬೇಕು.
- ಮ್ಯಾನೇಜರ್, ಆಫೀಸರ್ ಹುದ್ದೆಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
- ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮತ್ತು ಅಗತ್ಯ ದಾಖಲೆಗಳೊಂದಿಗೆ recruitment.helpdesk@alimco.in ಇ ಮೇಲ್ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸಬೇಕು.



















