ಚಿಕ್ಕಬಳ್ಳಾಪುರ: ನಿಲ್ಲಿಸಿದ್ದ ಸ್ವಿಫ್ಟ್ ಕಾರಿನ ಮೇಲೆ ಮರ ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ಬಾಗೇಪಲ್ಲಿ ಪಟ್ಟಣದ ಗೋಲ್ಡನ್ ಡಾಬಾ ಹತ್ತಿರ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ಗೋಲ್ಡನ್ ಡಾಬಾ ಬಳಿ ಕಾರು ನಿಲ್ಲಿಸಿದ್ದ ಸಂದರ್ಭದಲ್ಲಿ ಮರ ಉರುಳಿ ಬಿದ್ದಿದೆ. ಏಕಾಏಕಿ ಜೋರು ಗಾಳಿ ಬೀಸಿದ್ದರಿಂದಾಗಿ ಬೃಹತ್ ಮರ ಉರುಳಿ ಬಿದ್ದಿದೆ. ಬೆಂಗಳೂರಿನ ಆರ್ ಆರ್ ನಗರದ ಮೂಲದ ವ್ಯಕ್ತಿಯೊಬ್ಬರ ಕಾರಿನ ಮೇಲೆ ಮರ ಉರುಳಿ ಬಿದ್ದಿದೆ.
ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದಂತಾಗಿದೆ. ಬಾರೀ ಗಾತ್ರದ ಮರ ಬಿದ್ದ ಕಾರಣ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.