ಬೆಳಗಾವಿ: RSS ನೇತೃತ್ವದಲ್ಲಿ ಕರ್ನಲ್ ಸೋಫಿಯಾ ಖುರೇಶಿ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಫೇಕ್ ನ್ಯೂಸ್ ಪೋಸ್ಟ್ ಮಾಡಲಾಗಿದೆ. ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಇರೋ ಸೊಫಿಯಾ ಮಾನವ ಮನೆ. ಈ ಗೌಸಸಾಬ್ ಬಾಗೇವಾಡಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ ಎಂದು ಅನೀಸ್ ಉದ್ದೀನ್ ಎಂಬಾತ ತನ್ನ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿದ್ದಾನೆ.

ಇದೊಂದು ಫೇಕ್ ನ್ಯೂಸ್ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಸ್ಪಷ್ಟನೆಯನ್ನು ನೀಡಿದ್ದಾರೆ. ಫೇಕ್ ನ್ಯೂಸ್ ಹಿನ್ನೆಲೆ ನಗರದ ಜಿಲ್ಲಾ ಪೊಲೀಸರು ಈಗಾಗಲೇ ಹೈ ಅಲರ್ಟ್ ಆಗಿದ್ದು ಕೊಣ್ಣೂರ ಮಾವನ ಗೌಸಸಾಬ್ ಬಾಗೇವಾಡಿ ಮನೆಗೆ ಪೊಲೀಸರಿಂದ ಬಿಗಿ ಭದ್ರತೆ ನೀಡಲಾಗಿದೆ. ಗೋಕಾಕ ಸಿಪಿಐ ಸುರೇಶ ಆರ್ ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಗತ್ಯ ಸಾರ್ವಜನಿಕರನ್ನು ಭೇಟಿಯಾಗದಂತೆ ಸೋಫಿಯಾ ಕುಟುಂಬಸ್ಥರಿಗೆ ಸೂಚನೆ ನೀಡಿದ್ದು. ಮನೆ ಬಳಿಯಲ್ಲಿ ಬಿಗಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.