ಚಿಕ್ಕಬಳ್ಳಾಪುರ : ಗಾಂಜಾ ಸೇವನೆ ಮಾಡುತಿದ್ದ ವೇಳೆ ಗ್ಯಾಂಗ್ ಸಿಕ್ಕಿಬಿದ್ದಿರುವ ಘಟನೆ ಚಿಂತಾಮಣಿ ನಗರದ ಕೆಜಿಎನ್ ಬಡಾವಣೆಯಲ್ಲಿ ನಡೆದಿದೆ. ಗಾಂಜಾ ಸೇವನೆ ಮಾಡಿ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ತೂರಾಡುತ್ತಿದ್ದರು.
ಅನುಮಾನದಿಂದ ಅಲ್ಲಿನ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆದರಿಸಿ ದಾಳಿ ನಡೆಸಿದ ಪೋಲೀಸರು, ಚಿಂತಾಮಣಿ ಮೂಲದ ಸೈಯದ್ ಮುಜುಯಿಲ್,ಬೆಂಗಳೂರಿನ ಸೈಯದ್ ಅಬ್ದುಲ್ಲಾ,ಸೈಯದ್ ಫಹದ್,ಇಮ್ರಾನ್ ಪಾಷ ಎಂಬುವವರನ್ನು ಬಂಧಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.