ಮಂಡ್ಯ: ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಸುಬ್ಬಣ್ಣ ಅಯ್ಯಪ್ಪನ್ (Subbanna Ayyappan) ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಡಾ. ಸುಬ್ಬಣ್ಣ ಅಯ್ಯಪ್ಪ ಅವರ ಶವ ಶ್ರೀರಂಗಪಟ್ಟಣದ (Srirangapatna) ಸಾಯಿ ಆಶ್ರಮದ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಮೈಸೂರಿನ ಅಪಾರ್ಟ್ಮೆಂಟ್ ವೊಂದರಲ್ಲಿ ವಾಸಿಸುತ್ತಿದ್ದ ಅವರು, ಮೇ 7ರಂದು ನಾಪತ್ತೆಯಾಗಿದ್ದರು.
ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಈ ಸಾವು ಹಲವಾರು ಅನುಮಾನಗಳಿಗೆ ದಾರಿ ಮಾಡದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಶನಿವಾರ ಸಂಜೆ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆಗ ಪರಿಶೀಲಿಸಿದಾಗ ವಿಜ್ಞಾನಿಯ ಗುರುತು ಪತ್ತೆಯಾಗಿದೆ. ನದಿ ದಡದಲ್ಲಿ ಅವರ ಬೈಕ್ ಕೂಡ ಪತ್ತೆಯಾಗಿದೆ.