ನವದೆಹಲಿ: ಪಾಕಿಸ್ತಾನವು ಭಾರತ ದೇಶದ ವಿರುದ್ಧ ಸುಳ್ಳುಗಳ ಆರೋಪ ಮಾಡಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ(Sofiya Qureshi) ಹೇಳಿದ್ದಾರೆ.
ಶನಿವಾರ ಭಾರತ(India) ಹಾಗೂ ಪಾಕಿಸ್ತಾನದ(Pakistan) ನಡುವಿನ ಕದನ ವಿರಾಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್400 ಕ್ಷಿಪಣಿ, ಬ್ರಹ್ಮೋಸ್ ನೆಲೆ ನಾಶವಾಗಿಲ್ಲ. ಪಾಕಿಸ್ತಾನದ ಯಾವುದೇ ಮಸೀದಿಗಳನ್ನ ಟಾರ್ಗೆಟ್ ಮಾಡಿಲ್ಲ. ಕೇವಲ ಪಾಕ್ ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ್ದೇವೆ. ಪಾಕಿಸ್ತಾನ ಏರ್‌ಬೇಸ್‌ಗಳನ್ನ ಹೊಡೆದುರುಳಿಸಿದ್ದೇವೆ. ಆದರೂ ಪಾಕ್ ಸುಳ್ಳು ಆರೋಪ ಮಾಡಿದೆ. ಚಂಡೀಗಢದಲ್ಲಿ ಪಾಕ್ ಶೆಲ್ ದಾಳಿ ನಡೆಸಿರುವುದು ಸುಳ್ಳು. ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್‌ಗಳನ್ನ ಹೊಡೆದುರುಳಿಸಿದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆಯು(Indian Army) ಕೇವಲ ಪಾಕ್‌ನ ಸೇನಾವಲಯಗಳನ್ನ ಮಾತ್ರ ಗುರಿ ಮಾಡಿ ದಾಳಿ ಮಾಡಿದೆ. ನಮ್ಮ ದಾಳಿಯಿಂದ ಪಾಕಿಸ್ತಾನ ಸೇನೆಗೆ ಸಾಕಷ್ಟು ನಷ್ಟವಾಗಿದೆ. ಎಲ್‌ಓಸಿಯಲ್ಲಿಯೂ ಪಾಕಿಸ್ತಾನ ಗುಂಡಿನ ದಾಳಿ ಮಾಡಿತ್ತು. ಹೀಗಾಗಿ ಪಾಕ್ ಗೆ ಪ್ರತಿದಾಳಿಯಲ್ಲಿ ನಷ್ಟವಾಗಿದೆ ಎಂದಿದ್ದಾರೆ.



















