ಕಾರವಾರ: ಪತಿಗೆ ನಿದ್ರೆ ಮಾತ್ರೆ ಹಾಕಿ ಸಾವಿಗೆ ಕಾರಣವಾಗಿದ್ದ ಪತ್ನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಭಟ್ಕಳದ ರೇಷ್ಮಾ ಖಾನಮ್ ಶಿಕ್ಷೆಗೊಳಗಾದವಳು. ಭಟ್ಕಳ ಮೌಲಾನಾ ಆಜಾದ್ ರಸ್ತೆಯ ಅಬ್ದುಲ್ ನಾಸಿರ್ ಕೊಲೆಯಾದ ಪತಿ. 2017ರ ಫೆ.17 ರಂದು ಈ ಘಠನೆ ನಡೆದಿತ್ತು. ಪತಿಗೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸಿದ ಪತ್ನಿ ನಂತರ ವೇಲ್ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಳು. ಆನಂತರ ನಾಟಕವಾಡಿದ್ದಳು.
ವೇಲ್ ನ್ನು ವಾಷಿಂಗ್ ಮಷಿನ್ಗೆ ಹಾಕಿ ತೊಳೆದು, ಸಾಕ್ಷ್ಯ ನಾಶಪಡಿಸಿದ್ದಳು. ಆನಂತರ ಪೊಲೀಸರು ಪ್ರಕರಣ ಭೇದಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಶ ಡಿ.ಎಸ್ ವಿಜಯಕುಮಾರ್, ಅಪರಾಧ ಸಾಬೀತಾದ ಕಾರಣ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ, 6 ಸಾವಿರ ರೂ. ದಂಡ ವಿಧಿಸಿದ್ದಾರೆ.