ಹುಬ್ಬಳ್ಳಿ: ವೃದ್ಧ ವ್ಯಕ್ತಿಯೊಬ್ಬರು ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಶಬರಿ ನಗರದ ನಿವಾಸಿ ವೀರುಪಾರಕ್ಷಪ್ಪ ಛಬ್ಬಿ(70) ದೇಹದಾನ ಮಾಡಿರುವ ವೃದ್ಧ ಎನ್ನಲಾಗಿದೆ. ಅವರು ವೈದ್ಯಕೀಯ ಕಾಲೇಜಿಗೆ ದೇಹ ದಾನ ಮಾಡಿದ್ದಾರೆ.
ಮೃತ ವೀರುಪಾಕ್ಷಪ್ಪ ಅವರ ಕುಟುಂಬಸ್ಥರು ದೇಹವನ್ನು ಎಸ್ ಡಿ ಎಂ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ಸಾವಿಗೂ ಮೊದಲೇ ತಮ್ಮ ಕುಟುಂಬಕ್ಕೆ ವೀರುಪಾಕ್ಷಪ್ಪ ತಮ್ಮ ಕುಟುಂಬಸ್ಥರೊಂದಿಗೆ ಚರ್ಚೆ ಮಾಡಿದ್ದರು ಎನ್ನಲಾಗಿದೆ. ಸತ್ತ ನಂತರ ತನ್ನ ದೇಹವನ್ನು ದೇಹದಾನ ಮಾಡುವಂತೆ ಸೂಚನೆ ನೀಡಿದ್ದರಿಂದಾಗಿ ಕುಟುಂಬಸ್ಥರು ದಾನ ಮಾಡಿದ್ದಾರೆ. ವೀರುಪಾಕ್ಷಪ್ಪ ವಯೋಸಹಜವಾಗಿ ಸಾವನ್ನಪ್ಪಿದ್ದಾರೆ.