ಉತ್ತರ ಕನ್ನಡ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸಚಿವ ಅಮಿತ್ ಶಾ (Amith Sha) ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನೀಸ್ ಹುಲ್ಗರ್ ಬಂಧಿತ ಆರೋಪಿ ಎನ್ನಲಾಗಿದೆ. ಸಂಡೆ ಮಾರ್ಕೆಟ್ ನಿವಾಸಿ ಅನೀಸ್ ಹುಲ್ಗರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಆಸ್ಸಾಂ ರಾಜ್ಯದ ಮುಖ್ಯಮಂತ್ರಿ ಹೇಮಂತ ಬಿಸ್ವಾ ಶರ್ಮಾ ಅವರ ಮುಖಗಳ ಭಾವಚಿತ್ರಗಳನ್ನು ನಾಯಿಯ ದೇಹದ ಭಾವಚಿತ್ರಗಳಿಗೆ ಅಂಟಿಸಿ ವಿಕೃತಿ ಮೆರೆದಿದ್ದ.
ಅಲ್ಲದೇ, ಎಐಎಂಐಎಂ ಪಕ್ಷದ ಸಂಸದ ಅಸಾವುದ್ದಿನ ಓವೈಸಿ ಡಾಗ್ ಚೈನ್ ಹಿಡಿದು ಹೋಗುತ್ತಿರುವ ಭಾವಚಿತ್ರವನ್ನು ಫೇಸ್ಬುಕ್ ಖಾತೆ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದ. ಈ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.




















ಕಾಮೆಂಟರಿ ಬಾಕ್ಸ್ ಹೈಡ್ರಾಮಾ : ಲೈವ್‌ನಲ್ಲೇ ವಾಗ್ದಾಳಿಗಿಳಿದು ಮುಜುಗರಕ್ಕೀಡಾದ ಮಂಜ್ರೇಕರ್, ಮುರಳಿ ಕಾರ್ತಿಕ್!