ಭಾರತದಲ್ಲಿ ದೈವೀ ನಂಬಿಕೆಗಳಿಗೆ ಮತ್ತು ಪವಾಡಗಳಿಗೆ ವಿಶೇಷ ಮಹತ್ವವಿದೆ.
ಅದರಲ್ಲೂ ಪ್ರಸಿದ್ಧ ದೇವಸ್ಥಾನಗಳ ಸುತ್ತಮುತ್ತ ನಡೆಯುವ ವಿಶೇಷ ಘಟನೆಗಳು, ಈ ನಂಬಿಕೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಅದೇ ರೀತಿ ಒಡಿಶಾದ ಪುರಿ ಜಗನ್ನಾಥ ಮಂದಿರದಲ್ಲಿ ಇಂತದ್ದೇ ಒಂದು ಪವಾಡ ನಡೆದಿದ್ದು, ಗರುಡ ಪಕ್ಷಿಯೊಂದು ದೇವಸ್ಥಾನದ ಪವಿತ್ರ ಧ್ವಜವನ್ನು ಹಿಡಿದು ಹಾರಾಡಿದೆ. ಈ ಘಟನೆಯಿಂದ ಭಕ್ತರು ಪುಳಕಿತರಾಗಿದ್ದು, ಇದು ಶುಭ ಸಂಕೇತ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


















