ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

Sunita Williams: ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್: ಖಗೋಳ ಲೋಕದ ಧ್ರುವತಾರೆಯರು!

March 19, 2025
Share on WhatsappShare on FacebookShare on Twitter

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕ್ರ್ಯೂ9 ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಕೊನೆಗೂ ಭೂಮಿಗೆ ಮರಳಿದ್ದಾರೆ. ಅವರು ಸುರಕ್ಷಿತವಾಗಿ ಭೂಮಿಯನ್ನು ಸ್ಪರ್ಶಿಸಲಿ ಎಂದು ಕೋಟ್ಯಂತರ ಮನಸ್ಸುಗಳು ಅದರಲ್ಲೂ ವಿಶೇಷವಾಗಿ ಭಾರತೀಯರು ಪ್ರಾರ್ಥಿಸುತ್ತಲೇ ಇದ್ದರು. ಇದಕ್ಕೆ ಕಾರಣ 2003ರಲ್ಲಿ ಭಾರತಕ್ಕೆ ಮತ್ತು ಬಾಹ್ಯಾಕಾಶ ವಿಜ್ಞಾನ ಜಗತ್ತಿಗೆ ಆಗಿದ್ದ ಆಘಾತ!

ಫೆಬ್ರವರಿ 1, 2003ರಂದು ನಿಗದಿತ ಲ್ಯಾಂಡಿಂಗ್‌ಗೆ ಕೇವಲ 16 ನಿಮಿಷಗಳು ಬಾಕಿಯಿರುವಂತೆಯೇ ಬಾಹ್ಯಾಕಾಶ ನೌಕೆ ಕೊಲಂಬಿಯಾ ಗಗನದಲ್ಲೇ ಸ್ಫೋಟಗೊಂಡು, ಛಿದ್ರವಾಗಿತ್ತು. ಆ ದುರಂತದಲ್ಲಿ ಬಲಿಯಾದ ಗಗನಯಾನಿಗಳ ಪೈಕಿ ಭಾರತದ ಹೆಮ್ಮೆಯ ಪುತ್ರಿ, ಗಗನಯಾನಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಅವರನ್ನು ಕಳೆದುಕೊಂಡಿದ್ದು ಇಡೀ ಬಾಹ್ಯಾಕಾಶ ವಿಜ್ಞಾನ ಲೋಕಕ್ಕೆ ಮತ್ತು ಭಾರತಕ್ಕೆ ಆದ ದೊಡ್ಡ ನಷ್ಟ.
ಕಲ್ಪನಾ ಚಾವ್ಲಾ ಬಳಿಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮತ್ತೊಬ್ಬ ಗಗನಯಾನಿಯೆಂದರೆ ಸುನೀತಾ ವಿಲಿಯಮ್ಸ್. ಅಮೆರಿಕದಲ್ಲೇ ಹುಟ್ಟಿ ಬೆಳೆದಿದ್ದರೂ, ಭಾರತೀಯರಿಗೆ ಈಗಲೂ ಸುನೀತಾ “ನಮ್ಮವಳು”. ಸುನೀತಾ ಕೂಡ ಭಾರತದ ನಂಟನ್ನು ಗಟ್ಟಿಯಾಗಿಯೇ ಉಳಿಸಿಕೊಂಡು ಬಂದಿದ್ದಾರೆ. ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಭಾರತೀಯ ಮೂಲದ ಈ ಇಬ್ಬರು ಮಹಿಳೆಯರು ತಮ್ಮ ಅಮೋಘ ಸಾಧನೆಗಳಿಂದ ಪ್ರಪಂಚವನ್ನೇ ಅಚ್ಚರಿಗೊಳಿಸಿದ್ದಾರೆ. ಜೊತೆಗೆ ಜಗತ್ತಿನ ಮಹಿಳೆಯರಿಗೆ ಈ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಸ್ಫೂರ್ತಿಯನ್ನೂ ನೀಡಿದ್ದಾರೆ. ಬಾಹ್ಯಾಕಾಶ ಲೋಕದ ಈ ಇಬ್ಬರು ಧ್ರುವತಾರೆಯರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಕಲ್ಪನಾ ಚಾವ್ಲಾ
ಮಾರ್ಚ್ 17, 1962 ರಂದು ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಜನಿಸಿದ ಕಲ್ಪನಾ ಅವರು, ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು. ನಂತರ ಅಮೆರಿಕದ ಕೊಲೊರಾಡೊ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಮತ್ತು ಪಿಎಚ್ಡಿ ಪದವಿಗಳನ್ನು ಗಳಿಸಿದರು. ಅವರನ್ನು ಎಲ್ಲರೂ ಪ್ರೀತಿಯಿಂದ ‘ಮೊಂಟೊ’ ಎಂದು ಕರೆಯುತ್ತಿದ್ದರು. ಅವರ ತಂದೆ ಬನಾರಸಿ ಲಾಲ್ ಚಾವ್ಲಾ ಅವರು ಭಾರತ ವಿಭಜನೆಯ ಭೀಕರತೆಯನ್ನು ಕಣ್ಣಾರೆ ಕಂಡವರು. ಕಲ್ಪನಾಗೆ ಬಾಲ್ಯದಿಂದಲೇ ಬಾಹ್ಯಾಕಾಶದ ಬಗ್ಗೆ ವಿಶೇಷ ಆಸಕ್ತಿಯಿತ್ತು. ಶಾಲೆಯಲ್ಲಿನ ಭೌಗೋಳಿಕ ಯೋಜನೆಗಾಗಿ, ಕಲ್ಪನಾ ಒಂದು ಬಾರಿ ಹಳೆಯ ಪತ್ರಿಕೆಗಳ ತುಣುಕುಗಳನ್ನು ಬಳಸಿಕೊಂಡು ಚಂದ್ರ, ನಕ್ಷತ್ರಗಳು ತುಂಬಿದ ಬ್ರಹ್ಮಾಂಡದ ಮಾದರಿಯನ್ನು ನಿರ್ಮಿಸಿದ್ದಳು ಎಂದು ಅವರ ಶಿಕ್ಷಕಿ ಈಗಲೂ ನೆನಪಿಸಿಕೊಳ್ಳುತ್ತಾರೆ.

ಎಂಜಿನಿಯರಿಂಗ್ ಪದವಿ ಪಡೆದ ನಂತರ, ಕಲ್ಪನಾ ಅಮೆರಿಕಕ್ಕೆ ತೆರಳಿದರು, ಅಲ್ಲಿ ಅವರು ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಮತ್ತು ಪಿಎಚ್ಡಿ ಪೂರ್ಣಗೊಳಿಸಿದರು. ಅವರ ಸಂಶೋಧನೆಯು ಅವರನ್ನು 1988ರಲ್ಲಿ ನಾಸಾದ ಏಮ್ಸ್ ಸಂಶೋಧನಾ ಕೇಂದ್ರಕ್ಕೆ ಕರೆದೊಯ್ಯಿತು. ಅಲ್ಲಿ ಅವರು ಪವರ್-ಲಿಫ್ಟ್ ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್‌ನಲ್ಲಿ ಕೆಲಸ ಮಾಡಿದರು.

1997ರಲ್ಲಿ, ಕಲ್ಪನಾ ನಾಸಾದ STS-87 ಮಿಷನ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಆ ಮೂಲಕ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮೂಲದ ಮಹಿಳೆ ಎನಿಸಿಕೊಂಡರು. ಅಲ್ಲಿ 372 ಗಂಟೆಗಳನ್ನು ಕಳೆದು ಮತ್ತು 10.4 ದಶಲಕ್ಷ ಮೈಲುಗಳನ್ನು ಪ್ರಯಾಣಿಸಿ ಭೂಮಿಗೆ ಮರಳಿದ್ದರು. ಅವರ 2ನೇ ಬಾಹ್ಯಾಕಾಶ ಯಾನವು 2003ರಲ್ಲಿ ನಡೆದಿತ್ತು. ದುರದೃಷ್ಟವಶಾತ್, ಅವರು ಬರುತ್ತಿದ್ದ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣಕ್ಕೆ ಪ್ರವೇಶಿಸುವ ವೇಳೆ ಪತನಗೊಂಡಿತು. ಕಲ್ಪನಾ ಸೇರಿದಂತೆ ಏಳು ಖಗೋಳವಿಜ್ಞಾನಿಗಳು ಆಗಸದಲ್ಲೇ ಸುಟ್ಟು ಕರಕಲಾದರು.

ಸುನೀತಾ ವಿಲಿಯಮ್ಸ್
ಇನ್ನು, ಸುನೀತಾ ವಿಲಿಯಮ್ಸ್ ಅವರು ಗುಜರಾತ್ ಮೂಲದ ಭಾರತೀಯ ಅಮೆರಿಕನ್ ಗಗನಯಾನಿ. 1965ರಲ್ಲಿ ಅಮೆರಿಕದ ಓಹಿಯೋದಲ್ಲಿ ಜನಿಸಿದವರು. ಅವರ ತಂದೆ ಡಾ. ದೀಪಕ್ ಪಾಂಡ್ಯಾ ಗುಜರಾತ್‌ನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.

ಸುನೀತಾ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಪದವಿ ಪಡೆದು ನಾಸಾ ಸೇರಿದ್ದರು. 2006ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದರು. 195 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದ ಅವರು ಅಲ್ಲಿ ದೀರ್ಘಕಾಲ ಕಳೆದ ಮಹಿಳೆಯೆಂಬ ದಾಖಲೆ ಸೃಷ್ಟಿಸಿದ್ದರು. 2012ರಲ್ಲಿ ಎರಡನೇ ಬಾಹ್ಯಾಕಾಶ ಯಾನ. ಈ ವೇಳೆ ಬಾಹ್ಯಾಕಾಶದಲ್ಲಿ 50 ಗಂಟೆಗಳಿಗೂ ಹೆಚ್ಚು ಸಮಯವನ್ನು ನಡಿಗೆಯಲ್ಲೇ ಕಳೆದಿದ್ದರು. ನಂತರ 2024ರಲ್ಲಿ ಐಎಸ್ಎಸ್ ತಲುಪಿದ ಅವರು 9 ತಿಂಗಳ ಕಾಲ ಸಂಶೋಧನೆ ನಡೆಸಿ ಇದೀಗ ವಾಪಸಾಗಿದ್ದಾರೆ.

ಕಲ್ಪನಾ-ಸುನೀತಾ ಸಾಧನೆ
ಕಲ್ಪನಾ ಚಾವ್ಲಾ ಮೈಕ್ರೋಗ್ರಾವಿಟಿ ಮತ್ತು ರೋಬೋಟಿಕ್ಸ್ ಕುರಿತು ಸಂಶೋಧನೆ ನಡೆಸಿ, ನಾಸಾದ ವೈಜ್ಞಾನಿಕ ಉನ್ನತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಹುಟ್ಟುಹಾಕಿದ ಪರಂಪರೆಯು ಭಾರತದಲ್ಲಿ ಎಂಜಿನಿಯರುಗಳು ಮತ್ತು ಖಗೋಳಯಾತ್ರಿಗಳ ಸೃಷ್ಟಿಗೆ ಪ್ರೇರಣೆಯಾಗಿದೆ. ಸುನಿತಾ ವಿಲಿಯಮ್ಸ್ ನಾಸಾದ ಹೊಸ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಪರೀಕ್ಷಿಸುವ, ಜೀವಶಾಸ್ತ್ರ ಸಂಬಂಧಿತ ಪ್ರಯೋಗಗಳನ್ನು ನಡೆಸುವ ಕಾರ್ಯಗಳಲ್ಲಿ ಎತ್ತಿದ ಕೈ. ಬಾಹ್ಯಾಕಾಶ ನಡಿಗೆಯಲ್ಲೂ ಅವರು ಎಲ್ಲರನ್ನೂ ಮೀರಿಸಿದ್ದಾರೆ. ಭವಿಷ್ಯದ ಪೀಳಿಗೆಯವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಇಬ್ಬರಿಗೂ ಸಮೋಸಾ ಎಂದರೆ ಇಷ್ಟ
ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಇಬ್ಬರೂ ತಮ್ಮ ಭಾರತದ ನಂಟನ್ನು ಗಟ್ಟಿಯಾಗಿ ಅಪ್ಪಿಕೊಂಡವರು. ಇಬ್ಬರಿಗೂ ಸಮೋಸಾ ಎಂದರೆ ಪಂಚಪ್ರಾಣ. ಕಲ್ಪನಾ ಅವರೂ ತಮ್ಮ ಬಾಹ್ಯಾಕಾಶ ಯಾನದ ವೇಳೆ ಭಾರತೀಯ ಆಹಾರವನ್ನೇ ಹೆಚ್ಚು ಇಷ್ಟಪಡುತ್ತಿದ್ದರು. ಸುನೀತಾ ಕೂಡ ತಮ್ಮ ಪ್ರತಿ ಪಯಣದ ಸಮಯದಲ್ಲೂ ತಮ್ಮೊಂದಿಗೆ ಸಮೋಸಾವನ್ನು ಒಯ್ಯುತ್ತಾರೆ. 2024ರಲ್ಲಿ ಬೋಯಿಂಗ್ ಸ್ಟಾರ್ ಲೈನರ್ ನಲ್ಲಿ ತೆರಳಿದ್ದಾಗಲೂ ಅವರು ಸಮೋಸಾ, ಜೊತೆಗೆ, ಭಗವದ್ಗೀತೆ, ಉಪನಿಷತ್‌ನ‌ ಪ್ರತಿಗಳನ್ನೂ ಕೊಂಡೊಯ್ದಿದ್ದರು.

Tags: Kalpana chawlaNASASunita WilliamsWorld
SendShareTweet
Previous Post

ನಾಗ್ಪುರದಲ್ಲಿ ಹಿಂಸಾಚಾರದ ಮಾಸ್ಟರ್ ಮೈಂಡ್ ಫಹೀಂ ಖಾನ್; ಫೋಟೋ ರಿಲೀಸ್ ಮಾಡಿದ ಪೊಲೀಸರು

Next Post

Crime News: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ಪೀಸ್ ಮಾಡಿ, ಡ್ರಮ್‌ಗೆ ಹಾಕಿ ಸಿಮೆಂಟ್‌ನಿಂದ ಮುಚ್ಚಿದ ರಾಕ್ಷಸಿ!

Related Posts

ನಿಮ್ಮ ಹೆಸರಿನ ಸಿಮ್ ಕಾರ್ಡ್ ಬೇರೆಯವರಿಗೆ ಕೊಟ್ಟರೆ 50 ಲಕ್ಷ ರೂ. ದಂಡ : ಏನಿದು ಹೊಸ ನಿಯಮ?
ತಂತ್ರಜ್ಞಾನ

ನಿಮ್ಮ ಹೆಸರಿನ ಸಿಮ್ ಕಾರ್ಡ್ ಬೇರೆಯವರಿಗೆ ಕೊಟ್ಟರೆ 50 ಲಕ್ಷ ರೂ. ದಂಡ : ಏನಿದು ಹೊಸ ನಿಯಮ?

ಜೈ ಶ್ರೀರಾಮ್ ಮಾತ್ರವೇಕೆ, ‘ಹರ ಹರ ಮಹಾದೇವ’ ಏಕಿಲ್ಲ?: ಬಿಜೆಪಿ ವಿರುದ್ಧ ರೇವಂತ್ ರೆಡ್ಡಿ ಪ್ರಹಾರ, ಕಮಲ ಪಡೆ ತಿರುಗೇಟು!
ದೇಶ

ಜೈ ಶ್ರೀರಾಮ್ ಮಾತ್ರವೇಕೆ, ‘ಹರ ಹರ ಮಹಾದೇವ’ ಏಕಿಲ್ಲ?: ಬಿಜೆಪಿ ವಿರುದ್ಧ ರೇವಂತ್ ರೆಡ್ಡಿ ಪ್ರಹಾರ, ಕಮಲ ಪಡೆ ತಿರುಗೇಟು!

‘ಲಿಂಗ ಪರಿವರ್ತನೆ’ಗೆ ಆಕ್ರೋಶ : ಅತ್ತೆ-ಮಾವನಿಂದಲೇ ‘ನ್ಯೂಯಾರ್ಕ್ ಟೈಮ್ಸ್’ ಉನ್ನತಾಧಿಕಾರಿಯ ಹತ್ಯೆ!
ವಿದೇಶ

‘ಲಿಂಗ ಪರಿವರ್ತನೆ’ಗೆ ಆಕ್ರೋಶ : ಅತ್ತೆ-ಮಾವನಿಂದಲೇ ‘ನ್ಯೂಯಾರ್ಕ್ ಟೈಮ್ಸ್’ ಉನ್ನತಾಧಿಕಾರಿಯ ಹತ್ಯೆ!

ಮಹಾರಾಷ್ಟ್ರ ಮತದಾರರ ಪಟ್ಟಿ ಗೊಂದಲ : ಸ್ಥಳೀಯ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಚೊಕ್ಕಲಿಂಗಂ ಮನವಿ!
ದೇಶ

ಮಹಾರಾಷ್ಟ್ರ ಮತದಾರರ ಪಟ್ಟಿ ಗೊಂದಲ : ಸ್ಥಳೀಯ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಚೊಕ್ಕಲಿಂಗಂ ಮನವಿ!

ಅಕ್ಟೋಬರ್ 1ರಿಂದ ಹಲವು ಹಣಕಾಸು ನಿಯಮಗಳ ಬದಲಾವಣೆ : ಜನರಿಗೆ ಲಾಭವೋ? ಹೊರೆಯೋ?
ದೇಶ

ಅಕ್ಟೋಬರ್ 1ರಿಂದ ಹಲವು ಹಣಕಾಸು ನಿಯಮಗಳ ಬದಲಾವಣೆ : ಜನರಿಗೆ ಲಾಭವೋ? ಹೊರೆಯೋ?

ಪ್ರೀಪೇಡ್ ಗ್ರಾಹಕರಿಗೆ ಸಿಹಿ ಸುದ್ದಿ : ಇನ್ಮುಂದೆ ಬರಲಿದೆ 30 ದಿನಗಳ ರೀಚಾರ್ಜ್ ಪ್ಲಾನ್‌ಗಳು!
ದೇಶ

ಪ್ರೀಪೇಡ್ ಗ್ರಾಹಕರಿಗೆ ಸಿಹಿ ಸುದ್ದಿ : ಇನ್ಮುಂದೆ ಬರಲಿದೆ 30 ದಿನಗಳ ರೀಚಾರ್ಜ್ ಪ್ಲಾನ್‌ಗಳು!

Next Post
Crime News: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ಪೀಸ್ ಮಾಡಿ, ಡ್ರಮ್‌ಗೆ ಹಾಕಿ ಸಿಮೆಂಟ್‌ನಿಂದ ಮುಚ್ಚಿದ ರಾಕ್ಷಸಿ!

Crime News: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ಪೀಸ್ ಮಾಡಿ, ಡ್ರಮ್‌ಗೆ ಹಾಕಿ ಸಿಮೆಂಟ್‌ನಿಂದ ಮುಚ್ಚಿದ ರಾಕ್ಷಸಿ!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

2027ರ ಏಕದಿನ ವಿಶ್ವಕಪ್ ರೇಸ್‌ನಲ್ಲಿ ರವೀಂದ್ರ ಜಡೇಜಾ : ಬೌಲಿಂಗ್ ಕೋಚ್‌ ಮಹತ್ವದ ಹೇಳಿಕೆ!

2027ರ ಏಕದಿನ ವಿಶ್ವಕಪ್ ರೇಸ್‌ನಲ್ಲಿ ರವೀಂದ್ರ ಜಡೇಜಾ : ಬೌಲಿಂಗ್ ಕೋಚ್‌ ಮಹತ್ವದ ಹೇಳಿಕೆ!

2 ಸೆಂಟಿಮೀಟರ್‌ ಅಂತರದಲ್ಲಿ ಚಿನ್ನ ಕೈತಪ್ಪಿದ ನೋವು : ಬೆಳ್ಳಿ ಗೆದ್ದ ಬಳಿಕ ವಿಜಯ್ ಕರೆಗಾಗಿ ಕಾಯುತ್ತಿರುವ ಆ್ಯನ್ಸಿ ಸೋಜನ್!

2 ಸೆಂಟಿಮೀಟರ್‌ ಅಂತರದಲ್ಲಿ ಚಿನ್ನ ಕೈತಪ್ಪಿದ ನೋವು : ಬೆಳ್ಳಿ ಗೆದ್ದ ಬಳಿಕ ವಿಜಯ್ ಕರೆಗಾಗಿ ಕಾಯುತ್ತಿರುವ ಆ್ಯನ್ಸಿ ಸೋಜನ್!

ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 2 ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ

ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 2 ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ

ನಿಮ್ಮ ಹೆಸರಿನ ಸಿಮ್ ಕಾರ್ಡ್ ಬೇರೆಯವರಿಗೆ ಕೊಟ್ಟರೆ 50 ಲಕ್ಷ ರೂ. ದಂಡ : ಏನಿದು ಹೊಸ ನಿಯಮ?

ನಿಮ್ಮ ಹೆಸರಿನ ಸಿಮ್ ಕಾರ್ಡ್ ಬೇರೆಯವರಿಗೆ ಕೊಟ್ಟರೆ 50 ಲಕ್ಷ ರೂ. ದಂಡ : ಏನಿದು ಹೊಸ ನಿಯಮ?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

2027ರ ಏಕದಿನ ವಿಶ್ವಕಪ್ ರೇಸ್‌ನಲ್ಲಿ ರವೀಂದ್ರ ಜಡೇಜಾ : ಬೌಲಿಂಗ್ ಕೋಚ್‌ ಮಹತ್ವದ ಹೇಳಿಕೆ!

2027ರ ಏಕದಿನ ವಿಶ್ವಕಪ್ ರೇಸ್‌ನಲ್ಲಿ ರವೀಂದ್ರ ಜಡೇಜಾ : ಬೌಲಿಂಗ್ ಕೋಚ್‌ ಮಹತ್ವದ ಹೇಳಿಕೆ!

2 ಸೆಂಟಿಮೀಟರ್‌ ಅಂತರದಲ್ಲಿ ಚಿನ್ನ ಕೈತಪ್ಪಿದ ನೋವು : ಬೆಳ್ಳಿ ಗೆದ್ದ ಬಳಿಕ ವಿಜಯ್ ಕರೆಗಾಗಿ ಕಾಯುತ್ತಿರುವ ಆ್ಯನ್ಸಿ ಸೋಜನ್!

2 ಸೆಂಟಿಮೀಟರ್‌ ಅಂತರದಲ್ಲಿ ಚಿನ್ನ ಕೈತಪ್ಪಿದ ನೋವು : ಬೆಳ್ಳಿ ಗೆದ್ದ ಬಳಿಕ ವಿಜಯ್ ಕರೆಗಾಗಿ ಕಾಯುತ್ತಿರುವ ಆ್ಯನ್ಸಿ ಸೋಜನ್!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat