ಬ್ರಿಟನ್ ಮೂಲದ ಕಂಪನಿ ನಥಿಂಗ್ ಬಿಡುಗಡೆ ಮಾಡಿರುವ ಫೋನ್‌ಗಳು ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈಗಾಗಲೇ ನಥಿಂಗ್ ಫೋನ್ 1 ಹಾಗೂ 2 ಭಾರತದಲ್ಲಿ ತನ್ನ ಹೊಸ ನೋಟದಿಂದ ಗಮನ ಸೆಳೆದಿದೆ. ಹೀಗಾಗಿ ಕೆಲವೊಬ್ಬರು ಈ ಫೊನ್‌ಗೆ ಅಭಿಮಾನಿಗಳೂ ಆಗಿದ್ದಾರೆ. ಈ ಕಂಪನಿಯ ನಥಿಂಗ್ ಫೋನ್ 3 ಇದೇ ವರ್ಷ ಬಿಡುಗಡೆಯಾಗಲಿದೆ ಎಂಬ ಸುದ್ದಿ ಬಂದಿದೆ.
ನಥಿಂಗ್ ಫೋನ್ 3 ಈ ವರ್ಷದ ಅತ್ಯಂತ ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ಉತ್ಸಾಹವಿದೆ. ಸರಳತೆ ಮತ್ತು ವಿಶಿಷ್ಟ ಶೈಲಿಗೆ ಪ್ರಸಿದ್ಧವಾಗಿರುವ ನಥಿಂಗ್ ಕಂಪನಿಯು ತನ್ನ ಹಿಂದಿನ ಫೋನ್‌ಗಳ ಮೂಲಕ ಗಮನ ಸೆಳೆದಿದೆ. ಹೀಗಾಗಿ ಹೊಸ ಫೋನ್ ಕುರಿತ ಕೆಲವೊಂದು ಮಾಹಿತಿಗಳು ಸೋರಿಕೆಯಾಗಿವೆ.
ಅದರ ಪ್ರಕಾರ ಫೋನ್ ಹೊಸ ವಿನ್ಯಾಸ, ಹಾರ್ಡ್‌ವೇರ್ ಅಪ್‌ಗ್ರೇಡ್ ಪಡೆದುಕೊಂಡಿದೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ. ಅಂತೆಯೇ ಹೊಸ ನಥಿಂಗ್ ಫೋನ್ ಬಗ್ಗೆ ಇದುವರೆಗೆ ಗೊತ್ತಾಗಿರುವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆ ಯಾವಾಗ?
ನಥಿಂಗ್ 3 ಅನ್ನು 2025ರ ಮೊದಲಾರ್ಧದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಅಂದರೆ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಈ ಫೋನ್ ಬಿಡುಗಡೆಗೊಂಡು ಅಭಿಮಾನಿಗಳ ಮನೆ ಸೇರುವ ಸಾಧ್ಯತೆಗಳಿವೆ. ಅದಕ್ಕಾಗಿ ಕಂಪನಿಯ ನಾನಾ ರೀತಿಯ ತಯಾರಿಗಳನ್ನು ನಡೆಸಿಕೊಳ್ಳುತ್ತಿದೆ.
ವಿನ್ಯಾಸ ಮತ್ತು ತಾಂತ್ರಿಕ ವಿವರಗಳು
ನಥಿಂಗ್ ಫೋನ್ 3 ಕಂಪನಿಯ ಸಿಗ್ನೇಚರ್ ಸ್ಟೈಲ್‌ನ ಭಾಗವಾಗಿ ಪಾರದರ್ಶಕ ಹಿಂಬದಿ ವಿನ್ಯಾಸ ಹೊಂದಿರುತ್ತದೆ. ಫೋನ್‌ನಲ್ಲಿ ಎಲ್‌ಇಡಿ ಲೈಟ್ ಸ್ಟ್ರಿಪ್‌ಗಳು ಇರುವ ಸಾಧ್ಯತೆಯಿದೆ. ಇದು ಕೇವಲ ನೋಟ ಹೆಚ್ಚಿಸುವ ಜತೆಗೆ ನೋಟಿಫಿಕೇಶನ್‌ಗಳಂತಹ ಉಪಯುಕ್ತ ಫೀಚರ್‌ಗಳಿಗೆ ನೆರವಾಗಲಿದೆ. ಫೋನ್‌ನ ಮುಂಭಾಗದಲ್ಲಿ, 6.67-ಇಂಚುಗಳ LTPO AMOLED ಡಿಸ್‌ಪ್ಲೇ ಇರಲಿದೆ. ಇದರಲ್ಲಿ 120Hz ರಿಫ್ರೆಶ್ ರೇಟ್ ಮತ್ತು HDR10+ ಸಪೋರ್ಟ್ ಸಿಗಲಿದೆ.
ಪೆರ್ಫಾರ್ಮೆನ್ಸ್ ಮತ್ತು ಸ್ಟೋರೇಜ್
ನಥಿಂಗ್ ಫೋನ್ 3 ಅನ್ನು ಸ್ನ್ಯಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್ ಅಥವಾ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 8 ಎಲೈಟ್ ಬಳಸಿಕೊಂಡು ಶಕ್ತಿಶಾಲಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದು 12GB ರ್ಯಾಮ್ ಮತ್ತು 512GB ವರೆಗೆ UFS 4.0 ಸ್ಟೋರೇಟ್ ಆಯ್ಕೆಗಳನ್ನು ಹೊಂದಿರುವ ಸಾಧ್ಯತೆಯಿದೆ.
ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್
ಫೋನ್ 5,000mAh ಬ್ಯಾಟರಿ ಹೊಂದಿರಲಿದೆ. ಅದಕ್ಕಾಗಿ 45W ಫಾಸ್ಟ್ ಚಾರ್ಜಿಂಗ್ ಮಾಡಬಹುದು. ಒಂದು ಭಾರಿ ಚಾರ್ಜ್ ಮಾಡಿದರೆ ದಿನಪೂರ್ತಿ ಬಳಸಲು ಸಾಧ್ಯವಿದೆ.
ಪ್ರಮುಖ ಫೀಚರ್‌ಗಳು:
ಫೋನ್‌ನಲ್ಲಿ ಆಕ್ಷನ್ ಬಟನ್ ಇರುವ ಸಾಧ್ಯತೆಯಿದೆ, ಇದು ಹೊಸ ಮಾದರಿಯ ಐಫೋನ್‌ಗಳ ರೀತಿಯಲ್ಲೇ ಕೆಲಸ ಮಾಡಬಹುದು. ಈ ಮೂಲಕ ಫೀಚರ್‌ಗಳನ್ನು ಬೇಗ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಭಾರತದಲ್ಲಿ ನಥಿಂಗ್ ಫೋನ್ 3 ಬೆಲೆ?
2023ರಲ್ಲಿ ಬಿಡುಗಡೆಗೊಂಡ ನಥಿಂಗ್ ಫೋನ್ 2 ₹44,999 (8GB RAM + 128GB ಸ್ಟೋರೆಜ್ ವೇರಿಎಂಟ್ ) ಬೆಲೆಯಿಂದ ಪ್ರಾರಂಭವಾಗಿತ್ತು. ನಥಿಂಗ್ ಫೋನ್ 3 ಯು ₹50,000ಗಿಂತ ಕಡಿಮೆ ದರದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಈ ಬಾರಿ ಪ್ರೊ ವೇರಿಯೆಂಟ್ ಕೂಡಾ ಲಭ್ಯವಾಗಬಹುದು ಎಂಬ ಲೀಕ್‌ಗಳೂ ಕೇಳಿ ಬರುತ್ತಿವೆ. ಇದು ನಥಿಂಗ್ ಫೋನ್ 3ಗಿಂತ ಹೆಚ್ಚು ಬೆಲೆಯದಾಗಿರಬಹುದು ಎಂದು ಹೇಳಲಾಗಿದೆ.