ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ಹಾವಳಿ ಹೆಚ್ಚಾಗಿದ್ದು, ಬ್ರೇಕ್ ಹಾಕಲು ಪಾಲಿಕೆ ಹೊಸ ತಂತ್ರಕ್ಕೆ ಕೈ ಹಾಕಿದೆ.
ಪಾಲಿಕೆ ನೀಡಿರುವ ನಕ್ಷೆ ಉಲ್ಲಂಘಿಸಿ ಅಧಿಕ ಮಹಡಿ ಕಟ್ಟಿಸಿದ್ದರೆ, ಅಂತಹ ಕಟ್ಟಡಗಳನ್ನು ಕೆಡವಲು ಪಾಲಿಕೆ ಮುಂದಾಗಿದೆ. ಇತ್ತೀಚೆಗಷ್ಟೇ ನಗರದಲ್ಲಿ ಅನಧಿಕೃತವಾಗಿ ಕಟ್ಟುತ್ತಿದ್ದ ಕಟ್ಟಡವೊಂದು ಧರೆಗೆ ಉರುಳಿತ್ತು. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಸರ್ಕಾರ, ಪಾಲಿಕೆ ಆಯುಕ್ತರಿಗೆ ಆದೇಶ ನೀಡಿತ್ತು.
ಹೀಗಾಗಿ ಅನಧಿಕೃತವಾಗಿ ಹಾಗೂ ನಕ್ಷೆ ಉಲಂಘನೆ ಮಾಡಿರುವ ಕಟ್ಟಡಗಳನ್ನು ತೆರವು ಮಾಡಲು ಪಾಲಿಕೆ ಮುಂದಾಗಿದೆ. ಈಗಾಗಲೇ ಹಲವು ಕಡೆ ಕಟ್ಟಡ ಕೆಡವಲು ಪಾಲಿಕೆ ಮುಂದಾಗಿತ್ತು. ಆದರೆ, ಹಲವರು ಸ್ಟೇ ತಂದಿದ್ದಾರೆ. ಅಲ್ಲದೇ, ಪಾಲಿಕೆಯು ಹೆಚ್ಚುವರಿಯಾಗಿ ನಿರ್ಮಾಣ ಮಾಡಿದ ಪ್ಲೋರ್ ಗಳನ್ನು ಗುರುತಿಸಿ ಸೀಲ್ ಮಾಡಲು ಮುಂದಾಗಿದೆ.


















