ಬೆಂಗಳೂರು: ಬಿಎಂಟಿಸಿ (BMTC)ಪ್ರಯಾಣಿಕರು ಬಸ್ ಹತ್ತುವಾಗ ಎಚ್ಚರಿಂದ ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ ಯಾವ ಬಸ್ ನ ಬ್ರೇಕ್ ಫೇಲ್(brake fail) ಆಗುತ್ತೋ ಎನ್ನುವುದೇ ತಿಳಿಯದಂತಾಗಿದೆ.
ಭಾನುವಾರವಷ್ಟೇ(sunday) ಬಿಎಂಟಿಸಿ ಬಸ್ ನ ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದ ಎರಡು ಅಂಗಿಡಗಳ ಗೋಡೆಗಳಿಗೆ ನುಗ್ಗಿದ್ದ ಘಟನೆ ನಡೆದಿತ್ತು. ಅದೃಷ್ಟವಶಾತ್ ಅದು ಬೆಳಗ್ಗೆ ಬೇಗ ನಡೆದ ಹಿನ್ನೆಲೆಯಲ್ಲಿ ವಾಹನಗಳು ಹಾಗೂ ಜನರ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಯಾವುದೇ ದುರಂತ ಹಾಗೂ ಸಾವು-ನೋವು(death-pain) ಸಂಭವಿಸಿಲ್ಲ.
ಬಿಎಂಟಿಸಿ ಸಂಸ್ಥೆ ಬಸ್ ಗಳು(bus) ರಸ್ತೆಗೆ ಇಳಿಯೋದಕ್ಕೆ ಅರ್ಹತೆ ಕಳೆದುಕೊಂಡಿದ್ದರೂ ರಸ್ತೆಗೆ ಇಳಿದಿವೆಯೇ? ಎಂಬ ಆರೋಪ ಕೇಳಿ ಬರುತ್ತಿದೆ. ಸದ್ಯ ಬಿಎಂಟಿಸಿಯ ಅಂಕಿ-ಅಂಶಗಳೇ ಈ ಮಾಹಿತಿ ಬಹಿರಂಗ ಪಡಿಸುತ್ತಿವೆ.
ನಗರದಲ್ಲಿ ಕಳೆದ 8 ತಿಂಗಳಲ್ಲಿ 200ಕ್ಕೂ ಅಧಿಕ ಬಸ್ ಗಳ ಬ್ರೇಕ್ ಫೇಲ್ ಆಗಿವೆ. ಹೀಗಾಗಿ ರಸ್ತೆ ಮಧ್ಯೆ ಬಸ್ ಗಳು ಕೆಟ್ಟು ನಿಂತು ಪ್ರಯಾಣಿಕರಿಗೆ(passengers) ಕಿರಿಕಿರಿ ಹೆಚ್ಚು ಸೃಷ್ಟಿಸಿವೆ. ಇದರಿಂದ ರೋಸಿ ಹೋಗಿರುವ ಜನರು ಮೆಟ್ರೋ ರೈಲಿನತ್ತ ಕೂಡ ಮುಖ ಮಾಡುತ್ತಿರುವುದು ದುರಂತವಾಗುತ್ತಿದೆ.