ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಂಗಳಮುಖಿಯರ ಗ್ಯಾಂಗ್ ತಮ್ಮ ಜೊತೆಗಾತಿಯ ತಲೆ ಬೋಳಿಸಿ ಮನಸೋ ಇಚ್ಛೆ ಹಲ್ಲೆ ಮಾಡಿ ಪುಂಡಾಟ ಮೆರೆದಿರುವ ಪ್ರಕರಣಕ್ಕೆ ಇದೀಗ ರಾಜ್ಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ.
ಈ ಘಟನಾ ಸಂಬಂಧ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಮಹಿಳಾ ಆಯೋಗ, ಆರೋಪಿಗಳ ವಿರುದ್ದ ಕ್ರಮ ಕೈಗೊಂಡು ತನಿಖಾ ವರದಿಯನ್ನು ಶೀಘ್ರ ಆಯೋಗಕ್ಕೆ ಸಲ್ಲಿಸುವಂತೆ ಕೋರಿದೆ.
ಪ್ರಕರಣದ ಹಿನ್ನೆಲೆ :
ಅ.30ರಂದು ಮಂಗಳಮುಖಿಯರ ಗ್ಯಾಂಗ್ ತಮ್ಮ ಜೊತೆಗಾತಿಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪುಂಡಾಟ ಮೆರೆದಿರುವ ಘಟನೆ ಬೊಮ್ಮನಹಳ್ಳಿ ವಿರಾಟ್ ನಗರದಲ್ಲಿ ನಡೆದಿತ್ತು. ಸುಕನ್ಯಾ ಎಂಬ ಮಂಗಳಮುಖಿಯ ತಲೆ ಬೋಳಿಸಿ ಹಲ್ಲೆ ಮಾಡಿ ಗ್ಯಾಂಗ್ ವಿಕೃತಿ ಮರೆದಿದ್ದು, ತಮ್ಮ ಟೀಂ ಬಿಟ್ಟು ಬೇರೊಂದು ತಂಡ ಜೊತೆಗೆ ಹೋಗಿದ್ದಕ್ಕೆ ಆಕ್ರೋಶಗೊಂಡು ಸುಕನ್ಯಾಳನ್ನ ಕೆಆರ್ ಪುರದಿಂದ ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಬಂದು ಬೊಮ್ಮನಹಳ್ಳಿಗೆ ಕರೆದೊಯ್ದು ಹಲ್ಲೆ ಮಾಡಿದೆ.
ಸುಕನ್ಯಾ ಕೈಮುಗಿದು ಬೇಡಿಕೊಂಡ್ರು ಸಹ ಎಲ್ಲರೂ ಸೇರಿ ಹಿಟ್ಟಿನ ದೊಣ್ಣೆ , ಸೌಟು, ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ಮತ್ತೊಬ್ಬ ಮಂಗಳಮುಖಿಗೆ ತೋರಿಸಿದ್ದು, ಈ ವಿಡಿಯೋ ಕಾಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಬೊಮ್ಮನಹಳ್ಳಿ ಪೊಲೀಸರು ಸೊಮೋಟೋ ಕೇಸ್ ದಾಖಲಿಸಿಕೊಂಡು 7 ಮಂಗಳಮುಖಿಯರನ್ನು ಬಂಧಿಸಿದ್ದರು.
ಇದನ್ನೂ ಓದಿ : ಕೋರ್ಟ್ಗೆ ಹಾಜರಾದ ಡಿ-ಗ್ಯಾಂಗ್ |ತಪ್ಪೊಪ್ಪಿಕೊಳ್ಳದ ಕಾರಣ ನ.10ಕ್ಕೆ ವಿಚಾರಣೆ ಮುಂದೂಡಿಕೆ



















