ಹಾಸನ: ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು(Car) ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಓವರ್ ಟೇಕ್ (Over Take) ಮಾಡುವ ಅವಸರದಲ್ಲಿ ಈ ದುರ್ಘಟನೆ ನಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಹಾಸನ (Hassan) ತಾಲೂಕಿನ ಕಾರೇಕೆರೆ ಗ್ರಾಮದ ಕೃಷಿ ಕಾಲೇಜು ಎದುರು ಈ ಘಟನೆ ನಡೆದಿದೆ.
ಹಾಸನ ನಗರದ ಕೆ.ಹೊಸಕೊಪ್ಪಲು ಬಡಾವಣೆ ನಿವಾಸಿ ಶಾಂತಮ್ಮ (45) ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ. ಬೆಂಗಳೂರು ಮಾರ್ಗದಿಂದ ಬರುತ್ತಿದ್ದ ಆಲ್ಟೋ ಹಾಗೂ ವ್ಯಾಗನರ್ ಕಾರುಗಳು ಕಾರೇಕೆರೆ ಬಳಿ ಫ್ಲೈಓವರ್ ಬಳಿ ಓವರ್‌ಟೇಕ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.