ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸಂಸತ್ ನಲ್ಲಿ ವಕ್ಫ್ ಮಸೂದೆ ಸೇರಿದಂತೆ 16 ಮಸೂದೆಗಳನ್ನು ಪರಿಗಣನೆಗೆ ಸಿದ್ಧಪಡಿಸಲಾಗಿದೆ.
ಅಧಿವೇಶನಕ್ಕೂ ಮುನ್ನ ಸರ್ಕಾರ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಿದ್ದು, ಸಂಸತ್ತಿನ ಸುಗಮ ಕಲಾಪವನ್ನು ಖಚಿತಪಡಿಸಿಕೊಳ್ಳಲು ಸಹಕರಿಸುವಂತೆ ಎಲ್ಲ ಪಕ್ಷಗಳಿಗೆ ಮನವಿ ಮಾಡಲಾಗಿದೆ. ನ. 26ರಂದು ಅಧಿವೇಶನ ಇರುವುದಿಲ್ಲ. 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಭಯ ಸದನಗಳ ಸದಸ್ಯರೊಂದಿಗೆ ಸಂವಿದಾನ ಭವನದಲ್ಲಿ ಸಂವಿಧಾನ ದಿನ ಆಚರಿಸಲಾಗುವುದು ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ ಸೇರಿದಂತೆ ಎಂಟು ಮಸೂದೆಗಳು ಲೋಕಸಭೆಯಲ್ಲಿ ಬಾಕಿ ಉಳಿದಿವೆ. ವಿಪಕ್ಷಗಳು ಕೂಡ ಸರ್ಕಾರವನ್ನು ಕಟ್ಟಿ ಹಾಕಲು ಮುಂದಾಗಿವೆ. ಲೋಕಸಭೆಯಲ್ಲಿ ಬಾಕಿ ಉಳಿದಿರುವ ಮಸೂದೆಗಳು ವಕ್ಫ್ (ತಿದ್ದುಪಡಿ) ಮಸೂದೆಯನ್ನು ಒಳಗೊಂಡಿದ್ದು, ಉಭಯ ಸದನಗಳ ಜಂಟಿ ಸಮಿತಿಯು ಲೋಕಸಭೆಗೆ ತನ್ನ ವರದಿಯನ್ನು ಸಲ್ಲಿಸಿದ ನಂತರ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಸಿದ್ಧ ಮಾಡಲಾಗಿದೆ.