ಬೆಳಗಾವಿ: ಡಿಸೆಂಬರ್ 2 ರಿಂದ ಡಿಸೆಂಬರ್ 11 ರವರೆಗೆ ಒಟ್ಟು 9 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಸಲೀಂ ಅಹಮದ್ ಹೇಳಿದ್ದಾರೆ. ಅಧಿವೇಶನವನ್ನು ಇನ್ನೂ ಹೆಚ್ಚು ದಿನ ವಿಸ್ತರಿಸುವ ಬಗ್ಗೆ ಬಿಎಸಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಈ ಅಧಿವೇಶನವು ರಾಜ್ಯದ ಹಾಗೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯಾಗಲಿದ್ದು, ಈ ಬಗ್ಗೆ ಚರ್ಚಿಸಲು ಶಾಸಕರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದರು.
ದಕ್ಷಿಣ ಕನ್ನಡ ಭಾಗದ ಸಮಸ್ಯೆಗಳ ಚರ್ಚೆಗೂ ಶಾಸಕರು ಕೇಳಿದ್ದು, ಕೆಲವು ಶಾಲೆಗಳ ಅಂಗವಿಕಲ ಸಮಸ್ಯೆಗಳಿಗೆ ಸರ್ಕಾರ ಹೆಚ್ಚು ಸಹಾಯ ನೀಡುವಂತೆ ಸಂಘಟನೆಯವರು ಪತ್ರ ನೀಡಿದ್ದಾರೆ ಎಂದು ತಿಳಿಸಿದರು. ಸದನದ ಅಮೂಲ್ಯ ಸಮಯವನ್ನು ಜನಪರ ಸಮಸ್ಯೆಗಳಿಗೆ ಬಳಸಿಕೊಂಡು ಆಡಳಿತ ಹಾಗೂ ವಿಪಕ್ಷಗಳು ಒಟ್ಟಾಗಿ ಚರ್ಚಿಸಲಿವೆ ಮತ್ತು ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎಂದರು. ಇದೇ ವೇಳೆ ಬೆಳಗಾವಿಯಲ್ಲಿ ಪುಸ್ತಕ ಮೇಳ ಹಾಗೂ ಯೋಗ ಕಾರ್ಯಕ್ರಮವನ್ನೂ ಆಯೋಜಿಸಲಾಗಿದ್ದು, 9 ದಿನಗಳ ಸದನ ಅತ್ಯಂತ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಸಲೀಂ ಅಹಮದ್ ವಿಶ್ವಾಸ ವ್ಯಕ್ತಪಡಿಸಿದರು.


















