ಹಾಸನ : ಕಾಡುಕೋಣ ದಾಳಿಯಿಂದ ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನದ ಚನ್ನರಾಯಪಟ್ಟಣ ಟೌನ್‌ನಲ್ಲಿ ನಡೆದಿದೆ. ಶಾಂತಮ್ಮ (54) ಗಂಭೀರವಾಗಿ ಗಾಯಗೊಂಡ ಮಹಿಳೆ.
ಇಂದು ಬೆಳಗ್ಗೆ 8 ಗಂಟೆಗೆ ಚನ್ನರಾಯಪಟ್ಟಣದ ವಿದ್ಯಾನಗರದಲ್ಲಿ ಘಟನೆ ನಡೆದಿದೆ. ಶನಿವಾರ ಮುಂಜಾನೆ ಎಂದಿನಂತೆ ಹಂದಿಜೋಗಿ ಶಾಂತಮ್ಮ ಅವರು ಹಂದಿ ಮೇಯಿಸಲು ಬಂದಿದ್ದರು. ಈ ವೇಳೆ ಹಂದಿಗಳಿರುವ ಜಾಗಕ್ಕೆ ಕಾಡುಕೋಣವೊಂದು ಬಂದಿದೆ. ಆದರೆ, ಶಾಂತಮ್ಮ ಅದನ್ನು ಎಮ್ಮೆ ಎಂದು ತಿಳಿದು ಓಡಿಸಲು ಮುಂದಾದಾಗ ಆಕೆಯ ಮೇಲೆ ದಾಳಿ ನಡೆಸಿದೆ.
ಇದರಿಂದಾಗಿ ಅವರ ಎಡಗೈ ಮುರಿದಿದೆ. ಅಲ್ಲದೇ, ಜೋರಾಗಿ ನೆಲಕ್ಕೆ ಬಿದ್ದ ಪರಿಣಾಮ ಹೊಟ್ಟೆ ಹಾಗೂ ಕೈ ಕಾಲಿಗೆ ಗಾಯವಾಗಿದೆ. ಹೀಗಾಗಿ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.