ದಾಂಪತ್ಯಕ್ಕೆ ಲೈಂಗಿಕ ಕ್ರಿಯೆ ಎನ್ನವುದು ಅವಿಭಾಜ್ಯ ಅಂಗವಿದ್ದಂತೆ. ಪರಸ್ಪರ ಸಹಕಾರ ಈ ವಿಷಯದಲ್ಲಿ ಇರಬೇಕು. ಆದರೆ, ಇಲ್ಲೊಬ್ಬ ಮಹಿಳೆ ಲೈಂಗಿಕ ಕ್ರಿಯೆಗೂ ಮುನ್ನ ಪತಿಯ ಬಳಿಯೇ ಹಣ ಕೇಳುತ್ತಿದ್ದಳು ಎನ್ನಲಾಗಿದೆ. ಇದಕ್ಕೆ ಬೇಸತ್ತ ಪತಿ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ.
ತೈವಾನ್ ನ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ವಿಚ್ಛೇದನವನ್ನು ಪಡೆದಿರುವ ಪ್ರಕರಣವೊಂದು ಎಲ್ಲೆಡೆ ಭಾರೀ ಸುದ್ದಿಯಾಗಿದೆ. ವಿಚ್ಛೇದನಕ್ಕೆ ಪತಿ ನೀಡಿರುವ ಕಾರಣ ಕೇಳಿ ಈಗ ಎಲ್ಲರೂ ಶಾಕ್ ಆಗಿದ್ದಾರೆ. ಪ್ರತಿ ಬಾರಿ ಲೈಂಗಿಕ ಕ್ರಿಯೆಗೂ ಮುನ್ನ ಪತ್ನಿ ತನ್ನಿಂದ ಹಣದ ಬೇಡಿಕೆ ಇಡುತ್ತಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಬೇಸತ್ತು ಪತ್ನಿಗೆ ವಿಚ್ಛೇದನ ಪಡೆದಿದ್ದಾನೆ.
2014 ರಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿದ್ದು, ಆದರೆ ವರ್ಷಗಳು ಕಳೆಯುತ್ತಿದ್ದಂತೆ ಪತಿ ಪತ್ನಿಯರಿಬ್ಬರ ನಡುವೆ ಮಾತುಕತೆ ತೀರಾ ಕಡಿಮೆಯಾಗಿದೆ. ಆತ ದೈಹಿಕ ಸಂಪರ್ಕ ಬಯಿಸಿ ಬಂದಾಗಲೂ ಅವಳು ದೂರವಾಗುತ್ತಿದ್ದಳು. ಆದರೆ, ಇತ್ತೀಚೆಗೆ ಲೈಂಗಿಕ ಕ್ರಿಯೆ ನಡೆಸಬೇಕಾದರೂ ಆಕೆ ಹಣದ ಬೇಡಿಕೆ ಇಡುತ್ತಿದ್ದಳು ಎಂದು ಆತ ಆರೋಪಿಸಿದ್ದಾನೆ.
ಸದ್ಯ ಪತಿಯ ದೂರಿನ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯ ಆತನಿಗೆ ಪತ್ನಿಯಿಂದ ವಿಚ್ಛೇದನ ನೀಡಿದೆ. ಪ್ರತಿ ಬಾರಿ ಲೈಂಗಿಕತೆ ಬಯಸಿದಾಗ ಅಥವಾ ಅವಳೊಂದಿಗೆ ಮಾತನಾಡಲು ಬಯಸಿದಾಗ ಆಕೆ NT$500 (Rs 1,260) ಬೇಡಿಕೆ ಇಡುತ್ತಿದ್ದಳು ಎನ್ನಲಾಗಿದೆ.