ಈಗಂತೂ ಜನ ಬೇಸಿಗೆಯ ಬೇಗೆಗೆ ಸುಸ್ತಾಗಿ ಹೋಗಿದ್ದಾರೆ. ಏನಾದರೂ ತಣ್ಣಗೆ ಕುಡಿಬೇಕಪ್ಪ ಅಂತ ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಕೋಲ್ಡ್ ವಾಟರ್ ಸೇವಿಸುತ್ತಾರೆ. ಇನ್ನು ಕೆಲವರು ಈ ಕೋಲ್ಡ್ ವಾಟರ್ ಎಲ್ಲಾ ಬೇಡಪ್ಪ ಅಂತ ಮಡಿಕೆ ನೀರನ್ನು ಕುಡಿಯುತ್ತಾರೆ. ಈ ಮಡಿಕೆರೆ ನೀರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಅಂತಾ ಗೊತ್ತಾ, ಹಾಗಿದ್ರೆ ಈ ಸ್ಟೋರಿ ಪೂರ್ತಿ ಓದಿ..
ಮಣ್ಣಿನ ಮಡಿಕೆಯಲ್ಲಿರುವ ನೀರು ಆರೋಗ್ಯದ ಮೇಲೆ ಸಮಸ್ಯೆ ಬೀರಲ್ಲ. ಅದರ ರುಚಿಯಲ್ಲಿ ಸಿಹಿ ಇರುತ್ತದೆ. ಜೊತೆಗೆ ಯಾವಾಗಲೂ ತಣ್ಣಗಿರುತ್ತದೆ. ಮಣ್ಣಿನ ಮಡಕೆಯಲ್ಲಿರುವ ನೀರು ಹೇಗೆ ತಂಪಾಗಿರುತ್ತದೆ. ವಾಸ್ತವವಾಗಿ.. ಮಡಿಕೆಯ ಗೋಡೆಗಳಲ್ಲಿ ಲೆಕ್ಕವಿಲ್ಲದಷ್ಟು ಸಣ್ಣ, ಸಣ್ಣ ರಂಧ್ರಗಳಿರುತ್ತವೆ. ಅವುಗಳ ಮೂಲಕ ನೀರು ಸೋರುತ್ತಲೇ ಇರುತ್ತದೆ. ಇದರಿಂದ ಮಡಿಕೆಯ ಮೇಲ್ಮೈ ಯಾವಾಗಲೂ ತೇವವಾಗಿರುತ್ತದೆ. ಈ ರಂಧ್ರಗಳಿಂದ ನೀರು ಹೊರಬಂದು ದ್ರವ ರೂಪ ಪಡೆಯುತ್ತದೆ. ನೀರಿನ ಶಾಖದ ಒಂದು ಭಾಗ ಆವಿಯಾಗುವಿಕೆಯಲ್ಲಿ ಖಾಲಿಯಾಗುತ್ತದೆ. ಉಗಿಯಾಗುವಲ್ಲಿ ನೀರಿನ ಸಣ್ಣ ಕಣಗಳು ನೀರಿನಿಂದಲೇ ಶಕ್ತಿ ಪಡೆಯುತ್ತವೆ. ಹೀಗಾಗಿ ಮಡಿಕೆಯಲ್ಲಿ ನೀರು ಹೆಚ್ಚು ತಂಪಾಗಿರುತ್ತದೆ.
ಈ ನೀರನ್ನ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುತ್ತದೆ. ಜೊತೆಗೆ ಅತಿಯಾದ ಬಾಯಾರಿಕೆಯಾದರೆ ಗಂಟಲಿಗೆ ಪರಿಹಾರ ನೀಡುತ್ತದೆ. ಆದರೆ ಆ ಮಡಿಕೆ ಹಾಗೂ ಮಡಿಕೆಯಲ್ಲಿನ ನೀರನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು.