ರಾಕಿಂಗ್ ಸ್ಟಾರ್ ಯಶ್ ಈಗ ಗಾಂಧಿನಗರಕ್ಕೆ ಸೀಮಿತವಾಗಿಲ್ಲ. ವರ್ಲ್ಡ್ ಸಿನಿಮಾ ಮ್ಯಾಪಿನಲ್ಲಿ ಕಂಗೊಳಿಸುತ್ತಿದ್ದಾರೆ. ಕೆಲಸ ಮಾಡಿ ಆಮೇಲೆ ಮಾತಾಡೋಣ ಅಂತಿದ್ದ ಯಶ್ ಈಗ ಸುದ್ಧಿಯಾಗಿರೋದು ಒಂದು ವಿಷಕಾರಿ ಅಪ್ ಡೇಟ್ ನಿಂದ..! ‘Toxic’ ಜಗತ್ತಿನ ಒಳಗೆ ಸೃಷ್ಟಿಯಾಗಿರೋ ಒಂದು ಬೆಂಕಿ ನಿಜಾನಾ? Toxic ಗಾಗಿ ತುದಿಗಾಲಲ್ಲಿ ವೈಟ್ ಮಾಡ್ತಿರೋ ಪ್ರೇಕ್ಷಕರಿಗೆ ನಿಜವಾಗಲೂ ಇದೊಂದು ಶಾಕಿಂಗ್ ನ್ಯೂಸ್..!

‘Toxic’ ಸದ್ಯಕ್ಕೆ ಪ್ಯಾನ್ ವರ್ಲ್ಡ್ ಜಗತ್ತಿನ ವೈಬ್ರೇಶನ್ ಸಿನಿಮಾ..! ಯಶ್ ಹಗಲುರಾತ್ರಿ ಎನ್ನದೆ Toxic ಚಿತ್ರದ ತಯಾರಿಕೆಯಲ್ಲಿ ಮುಳುಗಿಬಿಟ್ಟಿದ್ದಾರೆ. ಆದರೆ ಇದೀಗ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ ಮಧ್ಯೆ ಏನೋ ಸಂಥಿಂಗ್ ಸರಿ ಇಲ್ಲ ಎಂಬ ಅನುಮಾನದ ಹೊಗೆ ಕಾಣಿಸುತ್ತಿದೆ. ಯಶ್ ಗೆ ಚಿತ್ರದ ಮೇಕಿಂಗ್ ಮತ್ತು ಕೆಲವು ದೃಶ್ಯಗಳು ಇಷ್ಟವಾಗಿಲ್ಲವಂತೆ. ಹಾಗಾಗಿ ಯಶ್, ಗೀತುರನ್ನ ಪಕ್ಕಕ್ಕಿಟ್ಟು ತಾವೇ ಡೈರೆಕ್ಷನ್ ಸೀಟ್ ಅಲಂಕರಿಸ್ತಾರ ಎಂಬ ಬಿಸಿಬಿಸಿ ಚರ್ಚೆ ಶುರುವಾಗಿದೆ.

2 ವರ್ಷಗಳಿಂದ ಯಶ್ Toxic ಜಪ ಮಾಡುತ್ತಿದ್ದಾರೆ. ಯಾಕೋ ಸ್ವಲ್ಪ ಜಾಸ್ತಿನೇ ಸಮಯವನ್ನ ಅಣ್ತಮ್ಮ ತೆಗೊಂಡ್ರು ಅಂತ ರಾಕಿಬಳಗವೂ ಯೋಚಿಸುತ್ತಿದೆ. ಇಲ್ಲಿ ರಿ-ಶೂಟ್ ಜಾಸ್ತಿಯಾಗಿದ್ದು, ನಿರ್ದೇಶಕಿ ಮತ್ತು ಹೀರೋ ನಡುವೆ ವಾದವಿವಾದ ವಾಗ್ವಾದ ನಡೆದಿದೆಯಂತೆ. ಯಶ್ ಗೆ ನಿರ್ದೇಶಕಿಯ ಮೇಲೆ ನಂಬಿಕೆಯಿಲ್ಲ ಎಂಬುದು ಒಂದು ಕಡೆಯಾದ್ರೆ ಯಶ್, ನಿರ್ದೇಶಕಿ ಹೇಳಿದಂತೆ ಕೇಳುತ್ತಿಲ್ಲ ಎಂಬುದೇ ಮತ್ತೊಂದು ವರ್ಷನ್. ಬಜೆಟ್ ₹600 ಕೋಟಿ ದಾಟಿರಬಹುದು ಎಂಬ ಅಂದಾಜಿದೆ.

ಗೀತು ಮೋಹನ್ ದಾಸ್ ನಿರ್ದೇಶನ ಎಂದಾಗಲೇ ಸಿನಿಮಾ ಸರ್ಕಲ್ ಅಚ್ಚರಿ ಪಟ್ಟಿತ್ತು. KGF ಸರಣಿಯ ಸಿನಿಮಾ ನಂತರ ಏಕಾಏಕಿ ಯಶ್ ಗೀತು ಸಿನಿಮಾ ಒಪ್ಪಿಕೊಂಡಿದ್ದೆ ಇದಕ್ಕೆ ಕಾರಣವಾಗಿತ್ತು. ಯಾಕಂದ್ರೆ ಗೀತುಮೋಹನ್ ದಾಸ್ ಹಿಂದಿನ ಚಿತ್ರಗಳ ಶೈಲಿ, ಗಳಿಕೆ ಮತ್ತು ಬಜೆಟ್ ಯಾವುದೂ ದೊಡ್ಡ ರೇಂಜ್ ನಲ್ಲಿರಲಿಲ್ಲ. ಯಶ್ ಯಾಕೆ ಒಬ್ಬ ಪಾಪುಲರ್ ಅಲ್ಲದ ನಿರ್ದೇಶಕರಿಗೆ ಸೈನ್ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು.

ಸದ್ಯಕ್ಕೆ toxic ಊಹಾಪೋಹಗಳು ಹರಿದಾಡುತ್ತಿವೆ. ಸಿನಿಮಾ ತಡವಾಗುತ್ತಿದೆ. ಬಜೆಟ್ ಮಿತಿ ಮಿರುತ್ತಿದೆ. ಇದೆಲ್ಲದಕ್ಕೂ ಫುಲ್ ಸ್ಟಾಪ್ ಇಡಬೇಕೆಂದರೆ ಸಿನಿಮಾ ನಿರೀಕ್ಷೆ ಮುಟ್ಟಬೇಕು…! ಯಶ್ ಆದಷ್ಟು ಬೇಗ Toxic ಅಂಗಳದಲ್ಲಿ ಏನಾಗುತ್ತಿದೆ ಎಂಬ ಹಾಟ್ ಅಪ್ ಡೇಟ್ ಕೊಡ್ಲೇಬೇಕು..!



















