ತುಮಕೂರು : ಜಿಲ್ಲೆಯ ಶಿರಾ ತಾಲೂಕಿನ ಹುಯಿಲುದೊರೆ ಗ್ರಾಮದ ಸೇತುವೆ ಬಳಿ ಗೋಧಿ ತುಂಬಿದ ಲಾರಿ ವೇಗವಾಗಿ ಬಂದು ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಲಾರಿ ಪಲ್ಟಿ ಹೊಡೆದ ಪರಿಣಾಮ ಗೋಧಿ ರಸ್ತೆ ತುಂಬ ಚೆಲ್ಲಿದೆ.
ಈ ವಿಷಯ ತಿಳಿಯುತ್ತಿದಂತೆ ಅಪಘಾತದ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಚೀಲಗಳೊಂದಿಗೆ ಬಂದು ಗೋಧಿಯನ್ನು ಬಾಚಿಕೊಂಡಿದ್ದಾರೆ. ರಸ್ತೆ ತುಂಬೆಲ್ಲಾ ಗೋಧಿ ಬಿದ್ದ ಹಿನ್ನೆಲೆ ಗ್ರಾಮಸ್ಥರು ರಾಶಿ ರಾಶಿ ಗೋಧಿಯನ್ನು ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ.
ಶಿರಾದಿಂದ ಹುಳಿಯಾರು ಕಡೆಗೆ ಬರುತ್ತಿದ್ದ ಗೋಧಿ ತುಂಬಿದ್ದ ಲಾರಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ : ಬೆಂಗಳೂರಿಗರೇ ಎಚ್ಚರ.. ಇನ್ಮುಂದೆ ಎಲ್ಲೆಂದರಲ್ಲಿ ಕಸ ಸುಟ್ಟರೆ 1 ಲಕ್ಷ ದಂಡ, 5 ವರ್ಷ ಜೈಲು ಫಿಕ್ಸ್!



















