ಯೋಗೇಶ್ವರ್ ಅವರನ್ನು ಜೆಡಿಎಸ್ ಯಾವತ್ತೂ ಕಡೆಗಣಿಸಿಲ್ಲ. ಅವರನ್ನು ಕಡೆಗಣಿಸುವ ಉದ್ಧೇಶ ಇದ್ದಿದ್ದರೆ ನಾವು ಸಭೆ ನಡೆಸುತ್ತಿರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರು ತಮ್ಮ ಹಠವನ್ನೇ ಮುಂದುವರೆಸಿದರು. ನಾವು ಮಿತಿ ಮೀರಿ ಬಾಗಿದೇವು. ಆದರೂ ಅವರು ತಮ್ಮ ಹಠ ನಡೆಸಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಕೂಡ ಅವರನ್ನು ಗೆಲ್ಲಿಸಲು ಮನಸ್ಸು ಮಾಡಿದ್ದರು. ಬಿಜೆಪಿ ನಾಯಕರು ನೀಡಿದ್ದ ಆಘಾತ ಸಹಿಸಿಕೊಂಡು ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸುವ ಪ್ರಯತ್ನಿಸುವ ನಿರ್ಧಾರವನ್ನು ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಾಡಿದ್ದರು ಎಂದಿದ್ದಾರೆ.