ಬೆಂಗಳೂರು: ಹಣದುಬ್ಬರದ ಏರಿಕೆ, ಬದಲಾದ ಜೀವನಶೈಲಿಯಿಂದಾಗಿ ಈಗ ಹಣ ಉಳಿತಾಯ ಮಾಡಿದರೆ ಸಾಲದು, ಅದನ್ನು ಹೂಡಿಕೆಯೂ ಮಾಡಬೇಕು. ಅದರಲ್ಲೂ, ನಾವು ಮಾಡುವ ಹೂಡಿಕೆಯು ಹಣದುಬ್ಬರವನ್ನು ಮೀರಿಸುವಂತಿರಬೇಕು. ಇದಕ್ಕಾಗಿ ತಜ್ಞರು ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ (Mutual Fund SIP Investment) ಮಾಡುವುದು ಒಳಿತು ಎನ್ನುತ್ತಾರೆ. ಇನ್ನು, ನಿಮಗೆ ಒಳ್ಳೆಯ ಸಂಬಳವಿದ್ದು, 10 ವರ್ಷದಲ್ಲಿ 50 ಸಾವಿರ ರೂ. ಉಳಿಕೆ, ಗಳಿಕೆ ಮಾಡಬೇಕು ಎಂಬ ಯೋಜನೆ ಇದೆಯೇ? ಇಷ್ಟು ಗಳಿಸಲು ತಿಂಗಳಿಗೆ ಎಷ್ಟು ಎಸ್ಐಪಿ ಕಟ್ಟಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ, ನಿಮಗೆ ನಾವಿಲ್ಲಿ ಲೆಕ್ಕಾಚಾರ ನೀಡಿದ್ದೇವೆ ನೋಡಿ.
ತಿಂಗಳಿಗೆ ಎಷ್ಟು ಕಟ್ಟಬೇಕು?
ಚೆಂದದೊಂದು ಅಪಾರ್ಟ್ ಮೆಂಟ್ ಕಟ್ಟಬೇಕು, ಕಾರು ಖರೀದಿಸಬೇಕು, ಮಗ ಅಥವಾ ಮಗಳ ಉನ್ನತ ಶಿಕ್ಷಣಕ್ಕೆ ಹಣ ಬೇಕು ಎನ್ನುವವರು 10 ವರ್ಷದಲ್ಲಿ 50 ಲಕ್ಷ ರೂ. ಉಳಿಕೆ, ಹೂಡಿಕೆ ಹಾಗೂ ಗಳಿಕೆ ಮಾಡಬೇಕು ಎಂದು ಬಯಸುತ್ತಾರೆ. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಎಸ್ಐಪಿಯ ರಿಟರ್ನ್ಸ್ ಅನ್ನು ಶೇ.12ರಷ್ಟು ಎಂದು ಅಂದಾಜಿಸಲಾಗುತ್ತದೆ. ಇಷ್ಟು ರಿಟರ್ನ್ಸ್ ಪಡೆದರೆ ನೀವು ಮಾಸಿಕ 21,735 ರೂಪಾಯಿ ಎಸ್ಐಪಿ ಕಟ್ಟಬೇಕಾಗುತ್ತದೆ.
ಷೇರು ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಯಿತು, ದೇಶದ ಮಾರುಕಟ್ಟೆ ಕುಸಿಯಿತು, ಹಾಗಾಗಿ, ಶೇ.10ರಷ್ಟು ರಿಟರ್ನ್ಸ್ ಬರುತ್ತದೆ ಎಂದರೆ, ನೀವು ತಿಂಗಳಿಗೆ 24,408 ರೂಪಾಯಿ ಎಸ್ಐಪಿ ಕಟ್ಟಬೇಕಾಗುತ್ತದೆ. ಹೀಗೆ, ಪ್ರತಿ ತಿಂಗಳು ಎಸ್ಐಪಿ ಕಟ್ಟುತ್ತ ಹೋಗಿ, ನೀವು ಅಂದುಕೊಂಡಷ್ಟು ರಿಟರ್ನ್ಸ್ ಲಭಿಸಿದರೆ, 50 ಲಕ್ಷ ರೂಪಾಯಿ ನಿಧಿಯನ್ನು ಸಂಗ್ರಹಿಸಬಹುದಾಗಿದೆ.
ನೀವು ತಿಂಗಳಿಗೆ 21,735 ರೂಪಾಯಿ ಎಸ್ಐಪಿ ಕಟ್ಟಿದರೆ, 10 ವರ್ಷದಲ್ಲಿ ಒಟ್ಟು 26.08 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಇದಕ್ಕೆ ಶೇ.12ರಷ್ಟು ರಿಟರ್ನ್ಸ್ ಎಂದರೆ, 23.92 ಲಕ್ಷ ರೂಪಾಯಿ ಬಡ್ಡಿಯ ಲಾಭ ಸಿಗುತ್ತದೆ. ಹಾಗಾಗಿಯೇ, ಸುದೀರ್ಘ ಅವಧಿಗೆ ಹೂಡಿಕೆ ಮಾಡುವುದು ಬೆಸ್ಟ್ ಎನ್ನುತ್ತಾರೆ ತಜ್ಞರು.
ಡಿಸ್ ಕ್ಲೇಮರ್
ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಯ ರಿಟರ್ನ್ಸ್ ಮಾರುಕಟ್ಟೆ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ. ಹಾಗಾಗಿ, ಇದು ರಿಸ್ಕ್ ನಿಂದ ಕೂಡಿದ ಹೂಡಿಕೆಯಾಗಿದೆ. ನಾವು ಇಲ್ಲಿ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಿದ್ದೇವೆಯೇ ಹೊರತು, ಇದು ಹೂಡಿಕೆಗೆ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರನ್ನು ಸಂಪರ್ಕಿಸಿ.
ಇದನ್ನೂ ಓದಿ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ.. 6 ದಶಕಗಳ ಕಾಲ ಮಿಂಚಿ ಮರೆಯಾದ ‘ಹೀ-ಮ್ಯಾನ್’



















