ಪ್ಯಾರಿಸ್ ಒಲಿಂಪಿಕ್ಸ್ ನ ಫೈನಲ್ ಪಂದ್ಯದಿಂದ ಕೇವಲ 50 ಗ್ರಾಂ ತೂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ.
50 ಕೆಜಿ ವಿಭಾಗದ ಫೈನಲ್ ಗೆ ತಲುಪಿದ್ದ ವಿನೇಶ್ ಫೋಗಟ್, ಪ್ರಶಸ್ತಿ ಪಂದ್ಯಕ್ಕೂ ಮುನ್ನ 50ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಅವರನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗಿದೆ. ಇದರಿಂದಾಗಿ ವಿನೇಶ್ ತುಂಬಾ ಆಘಾತಗೊಂಡಿದ್ದಾರೆ. ಅವರ ಆರೋಗ್ಯದಲ್ಲಿ ಕೂಡ ಏರುಪೇರಾಗಿದೆ. 2 ಕೆಜಿ ಹೆಚ್ಚಾಗಿದ್ದರಿಂದಾಗಿ ಅವರು ರಾತ್ರಿಯಿಡೀ ಸಾಕಷ್ಟು ಹೋರಾಟ ನಡೆಸಿ ತೂಕ ಕಡಿಮೆ ಮಾಡಿಕೊಳ್ಳಲು ಯತ್ನಿಸಿದ್ದರು. ಆದರೆ, ಅವರಿಗೆ 1 ಕೆಜಿ 850 ಗ್ರಾಂ ತೂಕ ಇಳಿಸಿಕೊಳ್ಳಲು ಸಾಧ್ಯವಾಗಿದೆ. ಕೇವಲ 50 ಗ್ರಾಂ ತೂಕ ಹೆಚ್ಚಾಗಿದ್ದಿದ್ದಕ್ಕೆ ಅವರು ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಈ ಕ್ರಮದ ನಂತರ ಇಡೀ ದೇಶ ವಿನೇಶ್ ಜೊತೆ ನಿಂತಿದೆ. ಪ್ರಧಾನಿ ಮೋದಿ ಕೂಡ ವಿನೇಶ್ ಬೆಂಬಲಕ್ಕೆ ಬಂದಿದ್ದು, ಸರ್ಕಾರದಿಂದ ಸಾಧ್ಯವಾಗುವುದೆಲ್ಲವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೆಲ್ಲದರ ನಡುವೆ ವಿನೇಶ್ ಫೋಗಟ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಪ್ರಸ್ತುತ ಪ್ಯಾರಿಸ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಿರ್ಜಲೀಕರಣದಿಂದಾಗಿ ವಿನೇಶ್ ಅವರನ್ನು ಕ್ಲಿನಿಕ್ ಗೆ ದಾಖಲಿಸಲಾಗಿದೆ. ವಿನೇಶ್ ಕ್ಲಿನಿಕ್‌ಗೆ ದಾಖಲಾಗಿರುವ ಸುದ್ದಿ ತಿಳಿದ ನಂತರ ಪಿಟಿ ಉಷಾ ಮತ್ತು ಭಾರತೀಯ ಅಧಿಕಾರಿಗಳ ತಂಡ ಅವರನ್ನು ಭೇಟಿ ಮಾಡಲು ಅಲ್ಲಿಗೆ ತೆರಳಿದ್ದಾರೆ ಎನ್ನಲಾಗಿದೆ.