ಚೆನ್ನೈ: ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಅವರದೇ ನೆಲದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 17 ವರ್ಷಗಳ ನಂತರ ಚೆಪಾಕ್ ಕೋಟೆಯಲ್ಲಿ ಚೆನ್ನೈ ವಿರುದ್ಧ ಗೆದ್ ಇತಿಹಾಸ ಮಾಡಿದೆ. ಗೆಲುವಿನ ಹುಡುಗರಿಗೆ ಉದ್ಯಮಿ ವಿಜಯ್ ಮಲ್ಯಾ ಅಭಿನಂದನೆ ಸಲ್ಲಿಸಿದ್ದಾರೆ
ಎಕ್ಸ್‌ನಲ್ಲಿ ಶುಭಾಶಯ ತಿಳಿಸಿದ ಅವರು, 18 ವರ್ಷಗಳ ನಂತರ ಚೆಪಾಕ್ ಕೋಟೆಯಲ್ಲಿ ದಕ್ಷಿಣದ ಎದುರಾಳಿ ಚೆನ್ನೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆಗಳು. ಬ್ಯಾಟಿಂಗ್ ಮತ್ತು ಬೌಲ್‌ನಲ್ಲಿ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ. ಧೈರ್ಯಶಾಲಿ ಹುಡುಗರೇ, ಇನ್ನೂ ಚೆನ್ನಾಗಿ ಆಟವಾಡಿ ಎಂದು ಹೇಳಿದ್ದಾರೆ.
ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೂ ಆರ್ ಸಿಬಿ ಗೆಲುವು ಸಾಧಿಸಿದ್ದಕ್ಕೆ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಇದೆ.
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ 20 ಓವರ್‌ಗೆ 8 ವಿಕೆಟ್ ಕಳೆದುಕೊಂಡು ಕೇವಲ 146 ರನ್ ಗಳಿಸಿ ಸೋತಿದೆ.