ಮಂಗಳೂರು: ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆದಿದ್ದು, ಶೇ. 97.91ರಷ್ಟು ಮತದಾನ ನಡೆದಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡಿರುವ ಕ್ಷೇತ್ರಕ್ಕೆ ಇಂದು ಬೆಳಿಗ್ಗೆಯಿಂದ ಮತದಾನ ನಡೆಯಿತು. ಉಭಯ ಜಿಲ್ಲೆಗಳಲ್ಲಿ 392 ಮತಗಟ್ಟೆ ನಿರ್ಮಿಸಲಾಗಿತ್ತು. ಒಟ್ಟು 6,032 ಮತದಾರರನ್ನು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರ ಹೊಂದಿತ್ತು.
ಉಡುಪಿ-ಚಿಕ್ಕಮಗಳೂರು ಸಂಸದರಾಗಿ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ರಾಜೀನಾಮೆಯಿಂದ ಪರಿಷತ್ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕಾಗಿ ಮತದಾ ನಡೆಯಿತು. ಬಿಜೆಪಿಯಿಂದ ಬಿ.ಆರ್.ಕಿಶೋರ್, ಕಾಂಗ್ರೆಸ್ನಿಂದ ರಾಜು ಪೂಜಾರಿ ಸ್ಪರ್ಧಿಸಿದ್ದರು. ಎಸ್ಡಿಪಿಐನಿಂದ ಅನ್ವರ್ ಸಾದತ್, ಪಕ್ಷೇತರ ಸದಸ್ಯ ದಿನಕರ ಉಳ್ಳಾಲ ಕೂಡ ಕಣದಲ್ಲಿದ್ದರು.
ಉಭಯ ಜಿಲ್ಲೆಗಳ ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಶಾಸಕರು, ಸಂಸದರು ತಮ್ಮ ಹಕ್ಕು ಚಲಾಯಿಸಿದ್ದಾರೆ.