ಕಲಬುರಗಿ: ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿದ್ದು, ಮಂಗಳಮುಖಿಯರೇ ಬಡಿದಾಡಿಕೊಂಡಿದ್ದರು. ಭಿಕ್ಷಾಟನೆ ಮಾಡಲು ತೆರಳಿದ್ದಾಗ ಪರಸ್ಪರ ಇಬ್ಬರು ಮಂಗಳಮುಖಿಯರು ಜಡೆ ಹಿಡಿದು ಜಗಳ ಮಾಡಿಕೊಂಡಿದ್ದರು. ಈ ಘಟನೆ ವೈರಲ್ ಆಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಂಗಳಮುಖಿಯರಾದ ಶಿಲಾ ಅಲಿಯಾಸ್ ವಿಜಯಕುಮಾರ ನಾಟೀಕಾರ್, ಭವಾನಿ ಅಲಿಯಾಸ್ ಬಸವರಾಜ್ ಜಮಾದಾರ, ಅಂಕಿತಾ ಅಲಿಯಾಸ್ ಅಂಕುಶ ಜಮಾದಾರ ಬಂಧಿತರು. ಅಲ್ಲದೇ, ಇನ್ನೂ ಕೆಲವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಂಗಳಮುಖಿಯೊಬ್ಬಳಿಗೆ ಇನ್ನುಳಿದ ಕೆಲವು ಮಂಗಳಮುಖಿಯರು ಬೆತ್ತಲೆಗೊಳಿಸಿ, ಹಲ್ಲೆ ಮಾಡಿ ತಲೆ ಬೋಳಿಸುವ ಭಯಾನಕ ವಿಡಿಯೋ ವೈರಲ್ ಆಗಿತ್ತು. ಆನಂತರ ವಿಡಿಯೋ ಆಧರಿಸಿ ಸಬ್ ಅರ್ಬನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದಾರೆ.
ಅಲ್ಲದೇ, ಮಂಗಳಮುಖಿಯನ್ನು ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ ನಡೆಸಿದ ಘಟನೆಯೂ ನಡೆದಿತ್ತು. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿತ್ತು. ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಕಲ್ಬುರ್ಗಿ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಘಟನೆ ನಡೆದಿದ್ದು ಇಷ್ಟೇ. ಹಲ್ಲೆಗೆ ಒಳಗಾದ ಅಂಕಿತಾ ಎನ್ನುವ ಮಂಗಳಮುಖಿ ಭಿಕ್ಷಾಟನೆ ಮಾಡಿದ್ದಳು. ಆದರೆ ಭಿಕ್ಷಾಟನೆ ಮಾಡಿದ್ದ ಪಾಲು ಕೊಡದಿದ್ದಕ್ಕೆ ಉಳಿದ ಮಂಗಳಮುಖಿಯರು ಅಂಕಿತಾಳ ಮೇಲೆ ಹಲ್ಲೆ ಮಾಡಿದ್ದರು. ತಲೆ ಕೂದಲು ಬೋಳಿಸಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದರು.ಈ ಕುರಿತು ಅಶೋಕ್ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.