ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha Election Results) ದೇಶದಲ್ಲಿ ಹಲವು ರೀತಿಯ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಂಡಿಯಾ (INDIA) ಬ್ಲಾಕ್ ದೊಡ್ಡ ಅಂಕ ಗಳಿಸಿ ಬಿಜೆಪಿಯ ಕನಸು ನುಚ್ಚು ನೂರು ಮಾಡಿದೆ. ಈ ಮಧ್ಯೆ ಇಂಡಿಯಾ ಮೈತ್ರಿಯ ಭಾಗವಾಗಿದ್ದ ಆಪ್, ಮೈತ್ರಿ ಮುರಿದುಕೊಂಡಿದೆ.
ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ಆಪ್ ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಕೇವಲ ಸಂಸತ್ ಚುನಾವಣೆಗೆ ಮಾತ್ರವೇ ಹೊರತು ವಿಧಾನಸಭಾ ಚುನಾವಣೆಗೆ ಅಲ್ಲ ಎಂದು ಆಮ್ ಆದ್ಮಿ ಪಕ್ಷ ಈಗಾಗಲೇ ಹೇಳಿದೆ.
ವಿಧಾನಸಭೆಗೆ ಸಂಬಂಧಿಸಿದಂತೆ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ. ಆಮ್ ಆದ್ಮಿ ಪಕ್ಷ ತನ್ನ ಸಂಪೂರ್ಣ ಶಕ್ತಿಯೊಂದಿಗೆ ಚುನಾವಣೆ ಎದುರಿಸಲಿದೆ” ಆಪ್ ನಾಯಕ ಗೋಪಾಲ್ ರೈ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಆಪ್ 3ರಲ್ಲಿ ಗೆದ್ದಿದೆ. ಜೆಡಿಯು ಹಾಗೂ ಟಿಡಿಪಿ ಪಕ್ಷಗಳು ಎನ್ ಡಿಎ ಮೈತ್ರಿಯಲ್ಲಿಯೇ ಮುಂದುವರೆಯುವುದಾಗಿ ಹೇಳಿದ ನಂತರ ಇಂಡಿಯಾ ಮೈತ್ರಿ ಅಧಿಕಾರದಿಂದ ದೂರ ಉಳಿದಿದೆ. ಇದರ ಮಧ್ಯೆ ಈಗ ಆಪ್ ಏಕಾಂಗಿಯಾಗಿ ಚುನಾವಣೆಯ ತಯಾರಿ ನಡೆಸುತ್ತಿದೆ.