ಕೋಲಾರ:ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಐತಿಹಾಸಿಕ ಕುರುಡುಮಲೆ ವಿನಾಯಕ ದೇವಾಲಯದಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಾಲೂರು ಕೂಡಾ ಮಾಜಿ ಅಧ್ಯಕ್ಷ ಸತೀಶ್ ಆರಾಧ್ಯ ನೇತೃತ್ವದಲ್ಲಿ ಗಣಪತಿಗೆ ದೇವರಿಗೆ ವಿಶೇಷ ಅಭಿಷೇಕ ಮತ್ತು ಹೂವಿನ ಅಲಂಕಾರ ಸೇವೆ ನಡೆಸಲಾಯಿತು. ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅಭಿಮಾನಿಗಳು, ಶೋಭಾ ಕರಂದ್ಲಾಜೆ ಅವರಿಗೆ ದೇವರು ಮತ್ತಷ್ಟು ಉತ್ತಮ ಆರೋಗ್ಯ ನೀಡಿ ದೇಶ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಹರಕೆ ಹೊತ್ತಿದ್ದಾರೆ. ಈ ವೇಳೆ ಊಟದ ವ್ಯವಸ್ಥೆ ಮಾಡಲಾಗಿತ್ತು.














