ಗುಜರಾತ್:ಅಪ್ರಾಪ್ತ ಬಾಲಕನೊಬ್ಬ ಮೂರು ವರ್ಷದ ಬಾಲಕಿ ಮೇಲೆ ಕಾರು ಹತ್ತಿಸಿರುವ ಘಟನೆ ಗುಜರಾತ್ನ ಅಹಮಾಬಾದ್ನ ನೋಬಲ್‌ನಗರದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಅದೃಷ್ಟಾವಶಾತ್ ಬಾಲಕಿ ಪ್ರಾಣಾಪಾಯದಿಂದ ಬದುಕುಳಿದಿದ್ದಾಳೆ. ಕಾರನ್ನು ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಎಂದು ವರದಿಯಾಗಿದೆ. ಕಾರು ಮಗುವಿಗೆ ಡಿಕ್ಕಿ ಹೊಡೆದಿರುವುದನ್ನು ನೋಡಿದ ಸ್ಥಳೀಯರು ಕೂಗಿಕೊಂಡರು, ನಂತರ ಆತ ವಾಹನವನ್ನು ನಿಲ್ಲಿಸಿದನು ಎಂದು ತಿಳಿದುಬಂದಿದೆ.
ಪೊಲೀಸರು ಈ ಪ್ರಕರಣ ದಾಖಲಿಸಿದ್ದು, ಕಾರು ಮಾಲೀಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲಿದ್ದಾರೆಯೇ ಕೆಎಲ್ ರಾಹುಲ್? ಒಂದು ತಮಾಷೆಯ ಹೇಳಿಕೆ ಹುಟ್ಟುಹಾಕಿದ ಭಾರೀ ಚರ್ಚೆ



















