ಬೈಂದೂರು : ಬೈಂದೂರಿನಿಂದ ಮಂಗಳೂರಿನ ಉಳ್ಳಾಲದವರೆಗೆ ಕಡಲ ಕಿನಾರೆಯಲ್ಲಿ ಬೋಟ್ ವ್ಯವಸ್ಥೆಯನ್ನು ಜಾರಿಗೆ ತರುವ ಚಿಂತನೆ ಇದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನಿಂದ ಅದಾನಿ ಫೋರ್ಟ್ಸ್ ಆಂಡ್ ಎಸ್ ಇಝೆಡ್ ಇದರ ಅಂಗ ಸಂಸ್ಥೆಯಾದ ಓಶಿಯನ್ ಸ್ಪಾರ್ಕಲ್ ಲಿಮಿಟೆಡ್ ಗಾಗಿ ನಿರ್ಮಿಸಲಾದ ಸುಮಾರು 60 ಕೋಟಿ ವೆಚ್ಚದ ಹಡಗನ್ನು ಮಲ್ಪೆಯ ಶಿಫ್ಟ್ ಬಿಲ್ಡಿಂಗ್ ಯಾರ್ಡ್ ನಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಬಳಿಕ ಮಾತನಾಡಿದ ಸಂಸದರು, ಬೈಂದೂರಿನಿಂದ ಮಂಗಳೂರಿನ ಉಳ್ಳಾಲದ ಕಡಲ ಕಿನಾರೆಯವರೆಗೆ ಬೋಟ್ ವ್ಯವಸ್ಥೆ ತರುವ ಚಿಂತನೆ ಇದೆ. ಹೆದ್ದಾರಿಗೆ ಪರ್ಯಾಯವಾಗಿ ಕಡಲ ಕಿನಾರೆಯಲ್ಲಿ ಈ ವಾಟರ್ ಮೆಟ್ರೋ ಆರಂಭಿಸಬೇಕೆನ್ನುವಂಥದ್ದು ನಮ್ಮ ಗುರಿಯಾಗಿದೆ. ಈ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ದೊರೆತಲ್ಲಿ ಅದನ್ನು ಕೊಚ್ಚಿನ್ ಶಿಪ್ ಯಾರ್ಡ್ ನಿಂದಲೇ ನಿರ್ಮಿಸಲಾಗುವುದು” ಎಂದು ತಿಳಿಸಿದ್ದಾರೆ.



















