ಬೆಂಗಳೂರು : ನಗರದ ಬೆಳ್ಳಂದೂರಿನಲ್ಲಿ ಇತ್ತೀಚಿಗೆ ನಡೆದ ನಿರ್ಮಾಣ ಹಂತದ ಕಟ್ಟಡದ 13ನೇ ಫ್ಲೋರ್‌ನಿಂದ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಕೇಸ್ ಪರೀಶಿಲನೆ ಮಾಡಲು ತೆರಳಿದ ಪೋಲಿಸರ ಮೇಲೆ ಬಿಹಾರಿಗಳು ದಾಳಿ ನಡೆಸಿದ್ಧಾರೆ.
ಇಬ್ಬರು ಕಾರ್ಮಿಕರ ಸಾವಿಗೆ ಕಾರಣ ಆದವರ ಬಂಧನ ಮಾಡುವಂತೆ ಒತ್ತಾಯ ಹೇರುತ್ತಿದ್ದು, ಸುಮಾರು 15-20 ಬಿಹಾರಿ ಕಾರ್ಮಿಕರು ಪೋಲಿಸರ ಮೇಲೆ ಕಟ್ಟಿಗೆ ರಾಡ್‌ನಿಂದ ದಾಳಿ ನಡೆಸಿದ್ದಾರೆ. ಜೊತೆಗೆ ಸೋಕೋ ವಾಹನದ ಗಾಜುಗಳನ್ನು ಹೊಡೆದು ರಂಪಾಟ ಮಾಡಿದ್ದಾರೆ. ಬಂಧನ ಮಾಡೋವರೆಗೆ ಮಹಜರಿಗೂ ಬಿಡಲ್ಲ ಅಂತ ಸಿಕ್ಕ ಸಿಕ್ಕ ವಸ್ತುಗಳಿಂದ ಅಟ್ಯಾಕ್ ಮಾಡಿದ್ದಾರೆ. ಸದ್ಯ ಹಲ್ಲೆಗೊಳಗಾದ ಪೊಲೀಸರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಘಟನಾ ಸ್ಥಳದಲ್ಲಿ ಸುಮಾರು 200ಕ್ಕೂ ಹೆಚ್ಚು ಪೊಲೀಸರಿಂದ ಲಾಠಿಚಾರ್ಜ್ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 15 ಬಿಹಾರಿಗಳು ಅರೆಸ್ಟ್ ಮಾಡಲಾಗಿದ್ದು, ಇದರಲ್ಲಿ ಕೆಲವರ ಕ್ರೈಂ ಹಿಸ್ಟರಿ ಇದ್ದಿರುವುದಾಗಿ ಮಾಹಿತಿ ಲಭ್ಯವಾಗಿದೆ.