ಅಪ್ರಾಪ್ತ ಚಾಲಕ ಕಾರು ಓಡಿಸಿ ಇಬ್ಬರ ಸಾವಿಗೆ ಕರಾಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಆತನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಈ ಘಟನೆ ನಡೆದಿದೆ. ಭಾನುವಾರದಂದು ಪುಣೆಯ ಕಲ್ಯಾಣನಗರದಲ್ಲಿ ಬಾಲಕ ಚಲಾಯಿಸುತ್ತಿದ್ದ ಕಾರು, ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಸಂದರ್ಭದಲ್ಲಿ ಅಪ್ರಾಪ್ತ ಬಾಲಕ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ 25ವರ್ಷದೊಳಗಿನ ಮಕ್ಕಳು ಮದ್ಯ ಸೇವಿಸುವಂತಿಲ್ಲ. ಆತ ಬಂಧನಕ್ಕೊಳಗಾಗಿ 15 ಗಂಟೆಯೊಳಗೆ ಜಾಮೀನು ಪಡೆದಿದ್ದಾನೆ. ಇದಕ್ಕೆ ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ನ್ಯಾಯಾಲಯ ಅಪ್ರಾಪ್ತನಿಗೆ ಅಪಘಾತ ಹಾಗೂ ಪರಿಹಾರ ಕುರಿತು 300 ಪದಗಳ ಪ್ರಬಂಧ ಬರೆಯಲು ಕೇಳಿದೆ ಅಷ್ಟೇ ಅಲ್ಲದೆ ಡಿ ಅಡಿಕ್ಷನ್ ಕೇಂದ್ರಕ್ಕೆ ಸೇರಬೇಕು ಹಾಗೂ ಟ್ರಾಫಿಕ್ ಪೊಲೀಸರ ಜತೆ 15 ದಿನಗಳ ಕಾಲ ಕೆಲಸ ಮಾಡುವ ಷರತ್ತಿನ ಮೇರೆಗೆ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಯನ್ನು ಬಂಧಿಸಲಾಗಿದೆ. ಅಲ್ಲದೇ, ಅಪ್ರಾಪ್ತನಿಗೆ ಮದ್ಯ ನೀಡಿದ ಆರೋಪದ ಮೇರೆಗೆ ಎರಡು ರೆಸ್ಟೋರೆಂಟ್‌ಗಳ ಮಾಲೀಕರು ಮತ್ತು ಅವರ ಸಿಬ್ಬಂದಿಯ ವಿರುದ್ಧ ಮೋಟಾರ್ ವಾಹನ ಕಾಯ್ದೆ (ಎಂವಿಎ) ಮತ್ತು ಜುವೆನೈಲ್ ಜಸ್ಟೀಸ್ ಆಕ್ಟ್ (ಜೆಜೆಎ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.